
ರಾಯಚೂರು : ಟಿಪ್ಪರ್ ಲಾರಿ ಹರಿದು ವ್ಯಕ್ತಿಯೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆಯೊಂದು ರಾಯಚೂರು ಗದ್ವಾಲ್ ರಸ್ತೆಯ ಸಿಂಗನಾಡಿ ಗ್ರಾಮದ ಬಳಿ ಜರುಗಿದೆ.
ರಾಯಚೂರು ನಗರದ ಕಲುಸಂಬಿ ಕಾಲೋನಿಯ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಪತಿ ಪತ್ನಿ ಇಬ್ಬರು ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಜರುಗಿದೆ. ಹದಗೆಟ್ಟ ರಸ್ತೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಒಂದು ವ್ಯಕ್ತಿಯ ಮೇಲೆ ಹರಿದಿದ್ದು, ಪತ್ನಿ ಪ್ರಾಣ ಭಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಒಂದು ಗದ್ವಾಲ್ ರಸ್ತೆ ಹದಗೆಟ್ಟಿದ್ದು, ಅದರಲ್ಲೂ ಪ್ರಮುಖವಾಗಿ ಅಕ್ರಮವಾಗಿ ಮೊರಂ ಸಾಗಿಸಲಾಗುತ್ತದೆ. ಈ ಒಂದು ಲಾರಿಗಳು ಅತಿ ವೇಗವಾಗಿ ಚಲಾಯಿಸುವುದರಿಂದ ಇಂತಹ ಘಟನೆಗಳು ಆಗಾಗ ಜರುಗುತ್ತಿರುತ್ತವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿ, ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
![]() |
![]() |
![]() |
![]() |
![]() |
[ays_poll id=3]