This is the title of the web page
This is the title of the web page
State News

ಮಸ್ಕಿ, ಸಿಂಧನೂರು ಅಕ್ರಮ ಭತ್ತ ಮಾರಾಟ ಪ್ರಕರಣ : ಸಿಬಿಐಗೆ ಹಸ್ತಾಂತರ..?


ರಾಯಚೂರು : ಕೆನರಾ ಬ್ಯಾಂಕಿನಲ್ಲಿ ಅಡಮಾನ ಬಿಟ್ಟ 130.41 ಕೋಟಿ ಮೌಲ್ಯದ ಭತ್ತ ಅಕ್ರಮ ಮಾರಾಟ ಮಾಡಲಾಗಿದ‌ ಪ್ರಕರಣವನ್ನು ಸಿಐಡಿ ಇದೀಗ ಸಿಬಿಐಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹೌದು ಕಳೆದ 3 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ರಾಯಚೂರು ಜಿಲ್ಲೆ ಸಿಂಧನೂರು ಮಸ್ಕಿ ತಾಲೂಕಿನ ಕೆನರಾ ಬ್ಯಾಂಕ್‌ನಲ್ಲಿ ಅಡಮಾನವಿಟ್ಟ 130.41 ಕೋಟಿ ಮೌಲ್ಯದ ಭತ್ತ ಅಕ್ರಮ ಮಾರಾಟ ಪ್ರಕರಣ ಕುರಿತು ಕೇಂದ್ರ ತನಿಖಾ ದಳದ (ಸಿಬಿಐ) ತನಿಖೆಗೆ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಶಿಫಾರಸು ಮಾಡಿದೆ. ಸಿಂಧನೂರು ತಾಲೂಕಿನ ಉಗ್ರಾಣಗಳಲ್ಲಿ ದಾಸ್ತಾನು ಮಾಡಿದ್ದ ಭತ್ತಕ್ಕೆ ಸಾಲ ಪಡೆದಿದ್ದ ಸುಮಾರು 494 ಮಂದಿ, ಬಳಿಕ ಬ್ಯಾಂಕ್‌ಗೆ ಮಾಹಿತಿ ನೀಡದೆ ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದರು. ಈ ಬಗ್ಗೆ ರಾಯಚೂರಿನ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ (ಪ್ರಾದೇಶಿಕ) ಸತ್ಯಪ್ರಕಾಶ್‌ ಸಿಂಗ್‌ ದೂರು ನೀಡಿದ್ದರು.

ಬ್ಯಾಂಕ್‌ ನಿಯಮಗಳಡಿಯಲ್ಲಿ ಕಾರ್ಯನಿರ್ವಹಿಸುವ ವೇರ್‌ಹೌಸ್‌ಗಳು ಹಾಗೂ ರೂರಲ್‌ ಗೋಡಾನ್‌ಗಳನ್ನೊಳಗೊಂಡ ನಿಗದಿತ ಖಾಸಗಿ ವೇರ್‌ಹೌಸ್‌ ಯುನಿಟ್‌ಗಳು (ಇಪಿಎಸ್‌ಯು) ಕೃಷಿ ಸರಕಿನ ಗುಣಮಟ್ಟ, ಪ್ರಮಾಣ ಹಾಗೂ ಭದ್ರತೆಯ ಮಾಹಿತಿ ನೀಡುವ ಹೊಣೆ ಹೊತ್ತಿರುತ್ತವೆ. ಅಂತೆಯೇ ವೇರ್‌ಹೌಸ್‌ ರಸೀತಿಗಳ ಆಧಾರದ ಮೇಲೆ ಕೃಷಿ ಸರಕನ್ನು ಅಡಮಾನವಾಗಿಟ್ಟುಕೊಂಡು ಸಂಬಂಧಪಟ್ಟ ಕೃಷಿ ಸರಕಿನ ವ್ಯಕ್ತಿಗಳಿಗೆ ದಾಸ್ತಾನು ಅಡಮಾನ ಸಾಲ ನೀಡುವ ವ್ಯವಸ್ಥೆ ಇದೆ.

ಈ ವ್ಯವಸ್ಥೆಯಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕವಿತಾಳ, ಬಳಗಾನೂರು, ಮಸ್ಕಿ ಹಾಗೂ ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 81 ಖಾಸಗಿ ವೇರ್‌ಹೌಸಗಳು ನೀಡಿದ ವೇರ್‌ ಹೌಸ್‌ ರಿಸಿಪ್ಟ್ಯ(ಡಬ್ಲ್ಯುಆರ್‌) ಆಧರಿಸಿ ಕೃಷಿ ಸರಕಿನ ಅಡಮಾನದ ಮೇಲೆ ಕೆನರಾ ಬ್ಯಾಂಕಿನಲ್ಲಿ 494 ಸಾಲಗಾರರು ಒಟ್ಟು 130.41 ಕೋಟಿ ಸಾಲ ಪಡೆದಿದ್ದರು. ಆದರೆ ಈ ಸಾಲವನ್ನು ಮರು ಪಾವತಿಸದೆ ಅಡಮಾನದ ದಾಸ್ತಾನಿನ ಜವಾಬ್ದಾರಿ ಹೊಂದಿದ್ದ ಖಾಸಗಿ ವೇರ್‌ಹೌಸ್‌ಗಳು ಹಾಗೂ ಸಂಬಂಧಪಟ್ಟ ಸಾಲಗಾರರು ಸೇರಿಕೊಂಡು ಅಕ್ರಮವಾಗಿ ಅಡಮಾವಿಟ್ಟಿದ್ದ ಭತ್ತವನ್ನು ಮಾರಾಟ ಮಾಡಿದ್ದರು. ಇದರಿಂದ ಬ್ಯಾಂಕಿಗೆ 185.31 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಕೆನರಾ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ (ಪ್ರಾದೇಶಿಕ) ಸತ್ಯಪ್ರಕಾಶ್‌ ಸಿಂಗ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


[ays_poll id=3]