
K2 ಕ್ರೈಂ ನ್ಯೂಸ್ : ಯಾದಗಿರಿ ನಗರದ ಆಶ್ರಯ ಲಾಡ್ಜ್ ನಲ್ಲಿ ಅನಾಮಧೇಯ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಡೆದಿದೆ.
ಯಾದಗಿರಿ ನಗರದ ಆಶ್ರಯ ಲಾಡ್ಜ್ ನಲ್ಲಿ ಅನಾಮಧೇಯ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು. ನಿನ್ನೆ ಸಂಜೆ ಲಾಡ್ಜ್ ಗೆ ಬಂದಿದ್ದ ವ್ಯಕ್ತಿ, ರಾತ್ರಿ ವೇಳೆ ಕೊಣೆಯಲ್ಲಿರುವ ಫ್ಯಾನಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ರೂಮ್ ಬಾಯ್ ಬಾಗಿಲು ತಟ್ಟಿದ್ದು ತೆರೆಯದೆ ಇದ್ದಾಗ,
ಸಂಶಯಗೊಂಡು ಕೋಣೆ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]