
ರಾಯಚೂರು : ಚಲಿಸುತ್ತಿದ್ದ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ರಾಯಚೂರು ತಾಲೂಕಿನ ಚಿಕ್ಕಸುಗೂರ ಗ್ರಾಮದ ಬಳಿ ನಡೆದಿದೆ.
ರಾಯಚೂರಿನಿಂದ ಹೈದರಾಬಾದ್ ಗೆ ಹೊರಟಿದ್ದ ತೆಲಂಗಾಣ ಬಸ್ಸಿಗೆ, ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಚಿಕ್ಕಸುಗೂರು ಗ್ರಾಮದ ಬಳಿ ಇರುವಂತಹ ಎಂಪಿಸಿಎಲ್ ಗೇಟ್ ಮುಂಭಾಗದಲ್ಲಿ ಘಟನೆ ಜರುಗಿದೆ. ಹೆದರಿಯಲ್ಲಿ ಸಾಗುತ್ತಿದ್ದ ಬಸ್ಸಿಗೆ ಅಡ್ಡ ರಸ್ತೆಯಿಂದ ಬಂದ ಲಾರಿ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಲಾರಿ ಚಾಲಕನಿಗೆ ಕಾಲು ಮುರಿದಿದ್ದು, ಬಸ್ಸಿನಲ್ಲಿದ್ದ 5ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಎಲ್ಲರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]