
ದೇವದುರ್ಗ : ಜಮೀನಿನಲ್ಲಿ ಬೋರ್ವೆಲ್ ಕೊರೆದು ಕಾಲು ದಾರಿಯಲ್ಲಿ ಮಲಗಿದ್ದ ಮೂರರ ಮೇಲೆ ಜೆಸಿಬಿ ಹರಿದು ದಾರಣವಾಗಿ ಸ್ಥಳದಲ್ಲಿ ಮೃತಪಟ್ಟ ಘಟನೆ ಎಂದು ದೇವದುರ್ಗದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಿಲವಂಜಿಯಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಷ್ಣು (26), ಶಿವರಾಮ್ (28), ಬಲರಾಮ್(30) ಮೃತ ದುರ್ದೈವಿಗಳಾಗಿದ್ದಾರೆ. ಜಮೀನಿನಲ್ಲಿ ಬೋರ್ವೆಲ್ ಕೊರೆದು ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರು ಮಲಗಿದ್ದರು. ಅದೇ ಕಾಲುದಾರಿಯಲ್ಲಿ ಬಂದ ಜೆಸಿಬಿ ಹರಿದಿದೆ. ಮೃತರು ಚತ್ತಿಸಗಢ ಮೂಲದವರು ಎನ್ನಲಾಗುತ್ತಿದೆ.
ಇನ್ನು ನಿಲವಂಜಿ ಗ್ರಾಮದ ಬಾಲಯ್ಯ ಎಂಬುವವರಿಗೆ ಸೇರಿದ ಜೆಸಿಬಿಯಾಗಿದ್ದು, ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದೇವದುರ್ಗ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಜೆಸಿಬಿ ವಶಕ್ಕೆ ಪಡೆದು ತನಿಖೆಯನ್ನು ನಡೆಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]