This is the title of the web page
This is the title of the web page
Local NewsVideo News

ರೈತರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ : 4ನೇ ತಾರೀಕು ನೀರು ಕೊಡುವ ಭರವಸೆ


ರಾಯಚೂರು : 104 ಮೈಲಿಗೆ ಆರು ಅಡಿ ನೀರು ಹರಿಸುವ ವಿಚಾರಕ್ಕೆ, ಆರಂಭಿಸಿರುವ ರೈತರ ಪ್ರತಿಭಟನೆಗೆ ಜಿಲ್ಲಾಡಳಿತ ಮಣಿದು 4ನೇ ತಾರೀಕು ನೀರು ಕೊಡುವ ಭರವಸೆ ನೀಡಿ, ಹೋರಾಟಗಾರರ ಮನವರಿಸುವಲ್ಲಿ ಯಶಸ್ವಿಯಾಗಿದ್ದು, ತಾತ್ಕಾಲಿಕವಾಗಿ ರೈತರು ಹೋರಾಟ ಹಿಂಪಡೆದಿದ್ದಾರೆ.

ಹೌದು ಇಂದು ಬೆಳಗ್ಗೆ 9 ಯಿಂದಲೇ ರಾಯಚೂರು ತಾಲೂಕಿನ ಸಾತ್ ಮೈಲ್ ಕ್ರಾಸ್ ಬಳಿ, ರೈತರು ರಸ್ತರೋಕೋ ಪ್ರತಿಭಟನೆ ಮಾಡಿ, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸಂಜೆ ಏಳು ಗಂಟೆಯಾದರೂ ಹೋರಾಟ ಕೈಬಿಡುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ, ರೈತರ ಹೋರಾಟಕ್ಕೆ ಮಣಿದು, ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ್ ನಾಯಕ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಸ್ಥಳಕ್ಕೆ ಆಗಮಿಸಿ, ಗಣೇಕಲ್ ಜಲಾಶಯ ತುಂಬಿಸಿಕೊಂಡು 4ನೇ ತಾರೀಕಿಗೆ ನಾಲೆಗಳಿಗೆ ಐದು ಅಡಿ ನೀರು ಕೊಡುವ ಭರವಸೆಯನ್ನ ನೀಡಿದ್ದಾರೆ, ಈ ಮೂಲಕ ಹೋರಾಟಗಾರರ ಮನವೊಲಿಸಿದ್ದಾರೆ.

ಜಿಲ್ಲಾಧಿಕಾರಿಗಳ ಭರವಸೆಯ ಮೇರೆಗೆ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.


[ays_poll id=3]