This is the title of the web page
This is the title of the web page
Politics NewsState News

ಬಿಜೆಪಿ ಪಕ್ಷದಿಂದಲೇ ಬಿ ವಿ ನಾಯಕ್ ಸ್ಪರ್ಧೆ….


K2kannadanews.in

Political News ರಾಯಚೂರು : ಲೋಕಸಭಾ ಚುನಾವಣೆಯಲ್ಲಿ (Loka sabha Election) ರಾಯಚೂರು ಕ್ಷೇತ್ರಕ್ಕೆ ಟಿಕೆಟ್ ಕೈ (Ticket miss) ತಪ್ಪಿ ಅಸಮಾಧಾನಗೊಂಡಿರುವ, ಬಿ ವಿ ನಾಯಕ್ (B V Nayak) ಅವರು ಬಿಜೆಪಿ (BJP) ಪಕ್ಷದಿಂದಲೇ ನಾಮಪತ್ರ (Nomination) ಸಲ್ಲಿಸಲಿದ್ದಾರೆ. ಈ ವಿಚಾರವನ್ನು ಈಗಾಗಲೇ ರಾಜ್ಯ ಮುಖಂಡರ ಗಮನಕ್ಕೂ ತಂದಿದ್ದೇನೆ ಎಂದರು.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಬಂಡಾಯ ತಾರಕಕ್ಕೆ ಏರಿದೆ. ಒಂದು ಕಡೆ ರಾಜ ಅಮರೇಶ್ವರ ನಾಯಕ್ (Raja amreshwar nayak) ಅವರು ಕ್ಷೇತ್ರದಲ್ಲಿ ಪ್ರಚಾರ (Campaning) ಆರಂಭಿಸಿದ್ದಾರೆ. ಜೆಡಿಎಸ್ (JDS)ನೊಂದಿಗೆ ಮೈತ್ರಿ ಇರುವ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ (Alince party leaders meeting) ಕಾರ್ಯಕರ್ತರ ಸಭೆಗಳನ್ನ ಮಾಡುತ್ತಿದ್ದಾರೆ. ಇತ್ತತ ಬಿಜೆಪಿ ಪಕ್ಷದಿಂದ ಟಿಕೆಟ್ ಕೈತಪ್ಪಿರುವ ಅಸಮಾಧಾನಿತ ಬಿ ವಿ ನಾಯಕ್ ಅವರು ಕೂಡ ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಇದೀಗ ದಿಡೀರನೆ (Suddenly) ತಮ್ಮ ನಿಲುವು ಬದಲಾಯಿಸಿದ್ದು ಟಿಕೆಟ್ ಕೇಳುವ ಬದಲಿಗೆ, ನಾನು ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ರಾಜ್ಯ ನಾಯಕರು (State leader’s) ನನ್ನನ್ನು ಕರೆಸಿ ಸಭೆ ಮಾಡಿ, ಕೊನೆಗಳಿಗೆವರೆಗೂ ಕಾಯುವಂತೆ (await for end) ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಕೂಡ ಬಿಜೆಪಿ ಪಕ್ಷದ ಚೌಕಟ್ಟಿನಲ್ಲಿಯೇ (Lemits of BJP) ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿ ಬಂದಿದ್ದೇನೆ. ಅದೇ ನಿಟ್ಟಿನಲ್ಲಿ ನಾನು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದಲೇ ನಾಮ ಪತ್ರ ಸಲ್ಲಿಸುತ್ತಿದ್ದೇನೆ ಎಂದು ಸ್ಪಷ್ಟ ನಿಲುಗು ತಿಳಿಸಿದ್ದಾರೆ.


[ays_poll id=3]