This is the title of the web page
This is the title of the web page
Crime NewsState News

ಪ್ರಿಯತಮೆಯನ್ನು ಊರಿಗೆ ಕಳಿಸಿದ್ದಕ್ಕೆ ಪಾಲಕರ ಮೇಲೆ ಹಲ್ಲೆ


K2kannadanews.in

Attack on parents : ಪ್ರೀತಿ (Love) ಹೆಸರಲ್ಲಿ ಕಿರುಕುಳ ಕೊಡುತ್ತಿದ್ದ ಹಿನ್ನೆಲೆ ಮಗಳನ್ನು (Daughter) ಊರಿಗೆ ಕಳಿಸಿದ್ದ ಪಾಲಕರ (Parents) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಣವ್ ಮತ್ತು ಸಹಚರರು ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.

ರಾಯಚೂರು (Raichur) ಜಿಲ್ಲೆ ಸಿಂಧನೂರು (Sindhanur) ತಾಲೂಕಿನ ಆರ್.ಹೆಚ್.ಕ್ಯಾಂಪ್ (RH camp) 3ರಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 14ರಂದು (April) ಘಟನೆ ನಡೆದಿದೆ. ಓರ್ವ ಯುವಕ ಪೋಷಕರು ಮಗಳನ್ನು ಬೇರೆ ಮಾಡಿ ಊರಿಗೆ ಕಳಿಸಿದ್ದೇ ಕಾರಣವಾಗಿಟ್ಟುಕೊಂಡು ಹಲ್ಲೆ ಮಾಡಿದ್ದಾನೆ. ಯುವಕನಿಗೆ ಯುವತಿ ಸಂಪರ್ಕಕ್ಕೆ ಸಿಗದಿದ್ದಾಗ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹೀರಾರಾ ಮೋಹನ್, ತಾಯಿ ಶ್ರುತಿ ಮಂಡಲ್ ಮತ್ತು ಸಹೋದರ ಹಿಮಾಂಶು, ಸಂಬಂಧಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ.

Oplus_131072

ಹೀರಾ ಮೋಹನ್ ಕಣ್ಣಿಗೆ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ್ದಾರೆ. ಯುವತಿ ತಾಯಿಯ ಸೀರೆ ಎಳೆದಾಡಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಗ್ರಾಮದಲ್ಲಿ ಅಟ್ಟಾಡಿಸಿ ಯುವತಿಯ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯನ್ನು ಮತ್ತೆ ಕರೆದುಕೊಂಡು ಬನ್ನಿ ಎಂದು ಹೇಳಿ ಹಲ್ಲೆ ಮಾಡಲಾಗಿದೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಳಗಾದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.


[ays_poll id=3]