This is the title of the web page
This is the title of the web page
Crime NewsVideo News

ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ : ಗಾಯಗೊಂಡ ಕಾರ್ಮಿಕರು ಬಿಚ್ಚಿಟ್ಟ ಸತ್ಯ..


K2kannadanews.in

Hatti gold mine ಲಿಂಗಸುಗೂರು : ದೇಶದ ಏಕೈಕ ಚಿನ್ನ (Gold mine) ಉತ್ಪಾದಿಸುವ ಹಟ್ಟಿ ಚಿನ್ನದ ಗಣಿಯ, ಇತ್ತೀಚೆಗೆ ಸುರಂಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಏರ್ ಬ್ಲಾಸ್ಟ್ (Air blast)ಆಗಿ, ಆರು ಜನ ಗಾಯಗೊಂಡ (Injured) ಘಟನೆ ನಡೆದಿದ್ದು, ಭಯಾನಕ ಘಟನೆ ಬಗ್ಗೆ ಕಾರ್ಮಿಕರು ಅನುಭವ ಹಂಚಿಕೊಂಡಿದ್ದು ಹೀಗೆ..!

ರಾಯಚೂರು (Raichur) ಜಿಲ್ಲೆ ಲಿಂಗಸುಗೂರು (Lingasuguru) ತಾಲೂಕಿನ ಹಟ್ಟಿ ಚಿನ್ನದ (Hatti gold mine) ಗಣಿಯಲ್ಲಿ ಏರ್ ಬ್ಲಾಸ್ಟ್ ದುರಂತ ಸಂಭವಿಸಿದೆ. ಸುರಂಗ ಮಾರ್ಗದ ಕೆಲಸದ ವೇಳೆಯಲ್ಲಿ ಏಕಾಏಕಿ ಏರ್ ಬ್ಲಾಸ್ಟ್ ಆಗಿದೆ. ಮಣ್ಣು ಕುಸಿದು ಉಸಿರಾಟ ಸಮಸ್ಯೆ ಎದುರಾಗಿದೆ. ಕೂಡಲೇ ಆರು ಜನ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಆರು ಕಾರ್ಮಿಕರು ಗಾಯಗೊಂಡಿದ್ದು, ಓಬ್ಬ ಕಾರ್ಮಿಕನಿಗೆ ಹೆಚ್ಚು ಪೆಟ್ಟಾಗಿದೆ. ಏರ್ ಬ್ಲಾಸ್ಟ್ ಆಗಿ ಹುಲಗಣ್ಣ, ಮಲ್ಲರಾವ್, ಪ್ರಭಾಕರ್, ಮೈಕಲ್, ಮರಿಸ್ವಾಮಿ ಎಂಬುವರಿಗೆ ಗಾಯಗಳಾಗಿವೆ.‌ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]