This is the title of the web page
This is the title of the web page
State News

ಹತ್ತಿಗೆ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ಹತ್ತಿ..


ರಾಯಚೂರು(Raichur): ಆಕಸ್ಮಿಕ ಬೆಂಕಿಗೆ(fire) ಮನೆಯಲ್ಲಿ ಸಂಗ್ರಹಿಸಿಟ್ಟ ಹತ್ತಿ(cotton) ಸುಟ್ಟು ಭಸ್ಮವಾದ ಘಟನೆ ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಲತಮ್ಮ(lathamma) ಎನ್ನುವವರು ತಾವು ಬೆಳೆದ ಸೀಡ್ ಅರಳೆ ಹತ್ತಿನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಉತ್ತಮ ಬೆಲೆಗಾಗಿ ಕಾಯುತ್ತಿದ್ದರು. ಆದರೆ ಕಳೆದ ರಾತ್ರಿ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಅಕ್ಕಪಕ್ಕದ ಮನೆಯವರು ಸೇರಿ ಬೆಂಕಿ ನಂದಿಸಿದರಾದರೂ ಪ್ರಯೋಜನೆ ಆಗಲಿಲ್ಲ.

ಹತ್ತಿ ಸಂಪೂರ್ಣ ಸುಟ್ಟು ಕರುಕಲಾಗಿದೆ. ಲಕ್ಷಾಂತರ ವೌಲ್ಯದ ಹತ್ತಿ ಸುಟ್ಟು ಲತಮ್ಮ ಅಪಾರ ನಷ್ಟ(loss) ಹೊಂದಿದ್ದಾರೆ. ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಘಟನೆಗೆ ಸಂಬಂದಿಸಿದಂತೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲಿಸಿ ಲತಮ್ಮ ಅವರ ಕುಟುಂಬಕ್ಕೆೆ ಸೂಕ್ತ ಪರಿಹಾರ ಸರ್ಕಾರದಿಂದ ಒದಗಿಸಿಕೊಡಲು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.


[ays_poll id=3]