K2kannadanews.in
Union Budget 2024: 2023-24ನೇ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸತತ 6ನೇ ಬಾರಿಗೆ(6th time) ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Normal seetaraman), ಈ ಮಧ್ಯಂತರ ಬಜೆಟ್ನಲ್ಲಿ ಯಾರಿಗೆಲ್ಲಾ ಸಿಹಿ ಹಂಚಲಿದ್ದಾರೆ ಎಂಬ ನಿರೀಕ್ಷೆಗಳು (Expection) ಸದ್ಯ ಹೆಚ್ಚಿವೆ.
ದೆಹಲಿಯ (Deheli) ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಲಿರುವ ಮೊದಲ ಬಜೆಟ್ (First budget in new parliament) ಇದಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯ ಕೊನೆ ಹಂತದಲ್ಲಿ ಈ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿ ಮತದಾರರಿಗೆ ಸಿಹಿ ನೀಡುವುದರ ಜತೆಗೆ ಆರ್ಥಿಕತೆಗೂ (use for economy) ಅನುಕೂಲವಾಗುವ ದೃಷ್ಟಿಯಿಂದ ಮಹತ್ವದ (important) ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಗಳು ಅಧಿಕವಾಗಿದೆ.
ಬಜೆಟ್ ಮಂಡನೆ ಬಳಿಕ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಬಜೆಟ್ ಮಂಡನೆಯಾಗುವ ಸಾಧ್ಯತೆಗಳೂ ಸಹ ಹೆಚ್ಚಿದ್ದು, ಈಗಾಗಲೇ ಲೋಕಸಭೆ ಚುನಾವಣೆಗೆ (Parliament election) ದಿನಗಣನೆ ಆರಂಭಗೊಂಡಿದೆ. ಈ ಬಾರಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಮಹಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಿಡಿಯುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಯಿದೆ.
[ays_poll id=3]