This is the title of the web page
This is the title of the web page
Crime NewsState News

ನಾನು ಮುಂದಿನ ತೆಲಂಗಾಣ ರಾಜ್ಯಪಾಲ ಅಂತ ನಂಬಿಸಿ 3.80 ಲಕ್ಷ ರೂ.ವಂಚನೆ..


K2kannadanews.in

Crime News : ತೆಲಂಗಾಣದ (Telangana) ಮುಂದಿನ ರಾಜ್ಯಪಾಲನಾಗುತ್ತೇನೆ (Governor) ಎಂದು ನಂಬಿಸಿ, ದಂಪತಿಗಳಿಗೆ ಪರಿಚಿತ ವ್ಯಕ್ತಿಯೊಬ್ಬ (know person) 3.80 ಲಕ್ಷ ರೂ ವಂಚಿಸಿದ (cheated) ಘಟನೆ ನಗರದಲ್ಲಿ ಜರುಗಿದೆ.

ಕಲಬುರ್ಗಿ(Kalburgi) ನಗರದ ಎಂಬಿ ನಗರ ನಿವಾಸಿ ಶಾಂತಕುಮಾರ (Shantakumar) ಜಟ್ಕೂರ ಎಂಬಾತ ಹಣ ವಂಚಿಸಿದಾತ. ಹಳೆ ಜೇವರಗಿ (Old jevargi road) ರಸ್ತೆ ಶಾಸ್ತ್ರೀ ನಗರದ ನಿವಾಸಿಗಳಾದ ವಿಶ್ವನಾಥ, ಪ್ರೇಮಕಲಾ ಕುಟುಂಬಕ್ಕೆ 3,4 ವರ್ಷದಿಂದ ಶಾಂತಕುಮಾರ ಪರಿಚಿತನಾಗಿದ್ದ.ಆಗಾಗ ಮನೆ (Home) ಬಂದು ಹೋಗುತ್ತಿದ್ದ. ತನ್ನ ವಾಹನಕ್ಕೆ ಸರಕಾರಿ ವಾಹನ (Government vehicle) ಎಂದು ಫಲಕ (Board) ಅಳವಡಿಸಿದ್ದ. ನಾನೇ ತೆಲಂಗಾಣದ ಮುಂದಿನ ರಾಜ್ಯಪಾಲನಾಗುತ್ತೇನೆ ಎಂದು ದಂಪತಿಗೆ ನಂಬಿಸಿದ್ದ.

ಈತನ ಮೋಸದಾಟದ ಬಲೆಗೆ ಬಿದ್ದ ದಂಪತಿಗಳು 2021ರ ಸಪ್ಟೆಂಬರ್ 19 ರಂದು ಎರಡು ಕಂತುಗಳಲ್ಲಿ (Instalment) 3.80 ಲಕ್ಷ ರೂ ನೀಡಿದ್ದರು. ಆಗ ಈ ದಂಪತಿಗಳ ಸಂಪರ್ಕಕ್ಕೆ ಸಿಕ್ಕದಂತೆ ಶಾಂತಕುಮಾರ ಪರಾರಿಯಾಗಿದ್ದ. ಫೋನಿಗೂ ಸಿಗುತ್ತಿರಲಿಲ್ಲ. ಈತ ದಂಪತಿಗಳಿಗೆ ನೀಡಿದ 3 ಚೆಕ್‍ಗಳು ಸಹ ಬೌನ್ಸ್ (Check bounce) ಆಗಿವೆ ಎಂದು ಅವರು ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.


[ays_poll id=3]