This is the title of the web page
This is the title of the web page
Crime NewsState News

ಪ್ರಿಯಕರನ ಮೇಲೆ ಮೋಹ : ಮೊದಲ ಮದುವೆ ಮರೆಮಾಚಿದ ಯುವತಿ


K2kannadanews.n

Crime News : ಪ್ರಿಯಕರನ ಜೊತೆ ಮದುವೆ (Love with marrying) ಮಾಡಿಕೊಂಡಿದ್ದಕ್ಕೆ, ಕುಟುಂಬಸ್ಥರಿಂದ ಜೀವಭಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ (SP Office) ಮೆಟ್ಟಿಲೇರಿ ರಕ್ಷಣೆ ಕೋರಿದ್ದ ನವಜೋಡಿಗಳ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಗೆ ಈಗಾಗಲೇ ಮೊದಲ ಮದುವೆ ಆಗಿರುವ ವಿಚಾರ ಬಹಿರಂಗವಾಗಿದೆ.

ಬೀದರ್(Bidar) ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಲೊಕೇಶ್ (Lokesh) ಹಾಗೂ ಭಾಲ್ಕಿ ತಾಲುಕಿನ ಕುರ್ನಳ್ಳಿ ನಿರ್ಮಲಾ ಪರಸ್ಪರ ಪ್ರೀತಿಸಿದ್ದಾರೆ (Love). ಪ್ರೀತಿ ಬಳಿಕ ಅಕ್ಟೋಬರ್ 23 ರಂದು ಮದುವೆ (Marred) ಆಗಿ, ಡಿಸೆಂಬರ್ 18 ರಂದು ಸಬ್ ರಿಜಿಸ್ಟರ್ (Sub registrar) ಕಚೇರಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ.

ಇನ್ನು ಯುವತಿ (Young lady) ನಾಪತ್ತೆ ಕುರಿತು ಜನವಾಡ ಠಾಣೆಯಲ್ಲಿ (janawadi police station) ಯುವತಿ ತಂದೆ ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದಾಗ, ಯುವತಿಗೆ ಈಗಾಗಲೇ ನಿತೇಶ ಎಂಬುವವರು ಮದುವೆ ಆಗಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಪಟೋಗಳು ಕೂಡಾ ಪೋಲೀಸ್ ಠಾಣೆಗೆ ನೀಡಿದ್ದಾರೆ. ಆದ್ರೆ ಮೊದಲ ಮದುವೆ ವಿಷಯವನ್ನ ನವಜೋಡಿಗಳಾದ ಲೊಕೇಶ ಹಾಗೂ ನಿರ್ಮಲಾ ತಿರಸ್ಕರಿಸಿದ್ದಾರೆ.


[ays_poll id=3]