This is the title of the web page
This is the title of the web page
State News

ನಿಮ್ಮ ಓಟರ್ ಐಡಿಯಲ್ಲಿ ಅಡ್ರೆಸ್ ಬದಲಿಸಬೇಕಾದ್ರೆ ಹೀಗೆ ಮಾಡಿ ಸಾಕು..!


K2kannadanews.in

Election news : ದೇಶದಲ್ಲಿ ಇದೀಗ ಲೋಕಸಭೆ ಚುನಾವಣೆ (Election) ಘೋಷಣೆಯಾಗಿದೆ. ನೀವು ಮತ ಚಲಾಯಿಸೋಕೆ ಓಟರ್ ಐಡಿ (Voter ID) ಬೇಕು. ಅದರಲ್ಲಿ ಏನಾದರೂ ತಪ್ಪಿದ್ದರೆ (misteks) ಅದನ್ನು ಸರಿಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ವಿಳಾಸ (Address) ತಪ್ಪಾಗಿದ್ದರೆ ಮತದಾನ ಮಾಡುವುದು ಕಷ್ಟ. ಆದ್ದರಿಂದ ಈಗಲೇ ಮತದಾರರ ಗುರುತಿನ ಚೀಟಿಯನ್ನು ನವೀಕರಿಸಲು ಆನ್‌ಲೈನ್‌ನಲ್ಲಿ (online) ಅರ್ಜಿ ಸಲ್ಲಿಸಿ.

ಚುನಾಣಾ ಆಯೋಗ (Election Commission) ಇದನ್ನು ಸರಳೀಕರಣ ಮಾಡಿದೆ. ನೀವು ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ನೀವು ಮೊದಲು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ www.nvsp.in ಗೆ ಲಾಗ್ ಇನ್ ಮಾಡಬೇಕು. ನಂತರ ನೀವು ವೆಬ್‌ಸೈಟ್ ಮುಖಪುಟದಲ್ಲಿ ಮತದಾರರ ಪಟ್ಟಿಯಲ್ಲಿನ ನಮೂದುಗಳ ಸಂಪಾದನೆಯನ್ನು ನೋಡುತ್ತೀರಿ. ಆ ವಿಭಾಗದ ಮೇಲೆ ಕ್ಲಿಕ್ ಮಾಡಿ. ಅದರ ನಂತರ ಫಾರ್ಮ್-8 ಮೇಲೆ ಕ್ಲಿಕ್ ಮಾಡಿ.

ಅದರ ನಂತರ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಕೆಲವು ಅಗತ್ಯ ವಿವರಗಳನ್ನು ನಮೂದಿಸಬೇಕು. ಇಲ್ಲಿ ನೀವು ಸ್ವಯಂ ಆಯ್ಕೆಯನ್ನು ಆರಿಸಬೇಕಾಗುತ್ತದೆ. ನಂತರ ಸಲ್ಲಿಸು ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಸದೀಯ ಕ್ಷೇತ್ರದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಅದರ ನಂತರ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರ ನಂತರ ನಿಮ್ಮ ಆಧಾರ್ ಸಂಖ್ಯೆ, ಇಮೇಲ್, ಮೊಬೈಲ್ ಸಂಖ್ಯೆ ನಮೂದಿಸಿ. ಈಗ ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ.


[ays_poll id=3]