
K2 ವೈರಲ್ ನ್ಯೂಸ್ : ನಮ್ಮ ಪರಿಸರದಲ್ಲಿ ಕೆಲವೊಮ್ಮೆ ನಾವೇ ಆಶ್ಚರ್ಯ ಚಿಕಿತರಾಗುವಂತ ಘಟನೆಗಳು ಇತ್ತೀಚಿಗೆ ನೋಡುತ್ತಿದ್ದೇವೆ. ನಿಸರ್ಗದಲ್ಲಿ ಅಡಗಿರುವ ಅದೆಷ್ಟೋ ಪ್ರಾಣಿ, ಪಕ್ಷಿಗಳ ಬಗ್ಗೆ ನಮಗೆ ಇನ್ನೂ ಗೊತ್ತೇ ಇಲ್ಲ. ಅಂತದೆ ಒಂದು ಪಾರದರ್ಶಕ ಜಲಚರ ಒಂದು ಪತ್ತೆಯಾಗಿದೆ. ಕಣ್ಣು ಬಿಟ್ಟರೆ ಇನ್ಯಾವುದೇ ಭಾಗ ಕಾಣುವುದೇ ಇಲ್ಲ. ಗಾಜಿನಂತೆ ಸಂಪೂರ್ಣ ಪಾರದರ್ಶಕ.
ಹೌದು ಸಾಮಾಜಿಕ ಜಾಲತಾಣಗಳು ವಿಚಿತ್ರ ಜೀವಿಗಳ ಕುರಿತಾದ ಅನೇಕ ಆಕರ್ಷಕ ಚಿತ್ರಗಳು ಮತ್ತು ವಿಡಿಯೋಗಳು ಹೊರಬರುತ್ತಿವೆ. ಅಂತಹ ಚಿತ್ರಗಳು ಪ್ರಕೃತಿಯ ಅದ್ಭುತ ಸೃಷ್ಟಿಗಳ ಬಗ್ಗೆ ಜನರಿಗೆ ಜ್ಞಾನವನ್ನು ನೀಡುತ್ತವೆ. ಇಂತಹ ಪಾರದರ್ಶಕ ಮೀನಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೋಡುಗರಲ್ಲಿ ಅಪಾರ ಕೌತುಕವನ್ನು ಮೂಡಿಸುತ್ತಿದೆ.
ಪಾರದರ್ಶಕ ಮೀನಿನ ವೀಡಿಯೊ ವೈರಲ್ ಆಗಿದ್ದು, ಕಣ್ಣುಗಳನ್ನು ಹೊರತುಪಡಿಸಿ ಅದರ ಯಾವುದೇ ಅಂಗಗಳು ಗೋಚರಿಸುವುದಿಲ್ಲ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಪಾರದರ್ಶಕ ಮೀನನ್ನು ಕ್ಯಾಮೆರಾದ ಕಡೆಗೆ ತೋರಿಸುತ್ತಿರುವುದು ಕಂಡುಬರುತ್ತದೆ. ಈ ಮೀನು ಸಂಪೂರ್ಣವಾಗಿ ಪಾರದರ್ಶಕವಾಗಿ ಕಾಣುತ್ತದೆ. ಅದರ ಕಣ್ಣುಗಳನ್ನು ಹೊರತುಪಡಿಸಿ, ದೇಹದ ಯಾವುದೇ ಭಾಗವು ಗೋಚರಿಸುವುದಿಲ್ಲ. ಇದರಿಂದ ಅನೇಕರು ಅಚ್ಚರಿಗೊಂಡಿದ್ದಾರೆ. ಇದು ಪ್ರಕೃತಿಯ ಪವಾಡ ಎಂದು ಬಣ್ಣಿಸಲಾಗಿದೆ.
Transperant fish, cannot see any organs, except the eyes.pic.twitter.com/wFCEzOA1yk
— The Best (@ThebestFigen) August 1, 2023
ಈ ಮೀನಿನ ಕಣ್ಣುಗಳು ಮಾತ್ರ ಕಾಣುತ್ತವೆ. ಉಳಿದ ದೇಹ ಮತ್ತು ಹೊಟ್ಟೆ ಕಾಣಿಸುತ್ತಿಲ್ಲ. ಇದನ್ನು ನೋಡಿ ಹಲವು ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ನಿಸರ್ಗದ ಪವಾಡ ಅಂತ ಕೆಲವರು ಹೇಳುತ್ತಾರೆ. ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ @ThebestFigen ಬಳಸಿ ಆಗಸ್ಟ್ 1 ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 40 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
![]() |
![]() |
![]() |
![]() |
![]() |
[ays_poll id=3]