This is the title of the web page
This is the title of the web page
Crime News

ಜೂಜು ಅಡ್ಡೆ ಮೇಲೆ ದಾಳಿ : ತಪ್ಪಿಸಿಕೊಳ್ಳಲು ನದಿಗೆ ಹಾರಿ ಪ್ರಾಣ ಬಿಟ್ಟ..


K2 ಕ್ರೈಂ ನ್ಯೂಸ್ : ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ನದಿಗೆ ಹಾರಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಮರಿಸ್ವಾಮಿ (30) ಮೃತ ವ್ಯಕ್ತಿ. ರಾಮನಗರ ಜಿಲ್ಲೆಯ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮರಿಸ್ವಾಮಿ ನದಿಗೆ ಹಾರಿದ್ದ. ಆತನನ್ನು ಬೆನ್ನಟ್ಟಿದ್ದ ಪೊಲೀಸರು, ಮರಿಸ್ವಾಮಿ ನದಿಯಲ್ಲಿ ಈಜಿ ತಪ್ಪಿಸಿಕೊಂಡಿದ್ದಾನೆ ಎಂದು ಭಾವಿಸಿ ವಾಪಸ್‌ ಹೋಗಿದ್ದರು.

ಆದರೆ 3 ದಿನಗಳ ಬಳಿಕ ಕನಕಪುರ ತಾಲೂಕಿನ ತಿಗಳರಹಳ್ಳಿ ಅರ್ಕಾವತಿ ನದಿಯಲ್ಲಿ ಮರಿಸ್ವಾಮಿಯ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಯು ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸರ ವಿರುದ್ಧ ಮೃತ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.


[ays_poll id=3]