This is the title of the web page
This is the title of the web page
Local News

ಕತ್ತಲಲ್ಲಿ ಶಾಸಕರ ಕಾರಿಗೆ ಅಡ್ಡಗಟ್ಟಿದ ಅಕ್ರಮ ಮರಳುಗಳ್ಳರಿಂದ ಬೆದರಿಕೆ


ದೇವದುರ್ಗ : ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರುಳುಗಾರಿಕೆ ಮಿತಿಮೀರಿ ಹೋಗಿದ್ದು ಇದೀಗ ಶಾಸಕರ ವಾಹನಕ್ಕೆ ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣ ಒಂದು ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೌದು ವಿವಿಧ ಕಾರ್ಯಕ್ರಮ ಮುಗಿಸಿ ಮನೆಗೆ ತರುತ್ತಿದ್ದ ವೇಳೆ, ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳು ಸಾಲುಗಟ್ಟಿ ನಿಂತಿರುವುದನ್ನು ಗಮನಿಸಿದ‌ ಶಾಸಕರ ಕಣ್ಣಿಗೆ ರಾಚುವಂತೆ ನಾರಿಯ ಲೈಟುಗಳನ್ನು ಹಾಕಿಕೊಂಡು ಹೋಗಿದ್ದಾರೆ. ಅಕ್ರಮ ಮರಳು ಸಾಗಾಟ ಗಮನಕ್ಕೆ ಮಾಡುತ್ತಿರುವುದು ಬರುತ್ತಿದ್ದಂತೆ, ಕೂಡಲೇ ಅಲರ್ಟ್ ಆದ, ಶಾಸಕಿ ಕರಿಯಮ್ಮ ನಾಯಕ್ ತಮ್ಮ ಬೆಂಬಲಿಗರೊಂದಿಗೆ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಮೂಲಕ 3 ಜೆಸಿಬಿ, ಟಿಪ್ಪರ್ ಪತ್ತೆ ಹಚ್ಚಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗದ ಹೇರುಂಡಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಅಡ್ಡೆಯನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಶಾಸಕಿ ಕರಿಯಮ್ಮ ನಾಯಕ್ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಪೊಲೀಸರು ಕೂಡ ದೌಡಾಯಿಸಿದರು. ಅಕ್ರಮ ಮರಳು ಅಡ್ಡೆಗೆ ಅವಕಾಶ ಮಾಡಿಕೊಟ್ಟಂತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕಿ ಕರಿಯಮ್ಮ ನಾಯಕ್ ಆಕ್ರೋಶ ವ್ಯಕ್ತ ಪಡಿಸಿದ್ದು, ಈ ಒಂದು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ತೋರಿಸಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು ಸೇರಿ ಪ್ರತಿಯೊಬ್ಬರ ಮೇಲು ಆಗಬೇಕು ಎಂದು ಸ್ಥಳದಲ್ಲಿಯೇ ಕುಳಿತು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.


[ays_poll id=3]