This is the title of the web page
This is the title of the web page
Crime NewsState NewsVideo News

ಅಂಗಡಿಗೆ ನುಗ್ಗಿದ ಕಳ್ಳರು ದೊಚಿದ್ದು ಬರೊಬ್ಬರಿ 53 ಮೊಬೈಲ್


K2kannadanews.in

ಸಿಂಧನೂರು : ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸರಣಿ ಕಳ್ಳತನಗಳಿಂದ ನಿವಾಸಿಗಳು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್ ಅಂಗಡಿ ಒಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೊಬೈಲ್ಗಳನ್ನ ಕಳ್ಳತನ ಮಾಡಿಕೊಂಡು ಹೋದ ಘಟನೆಯೊಂದು ಕಳೆದು ರಾತ್ರಿ ಜರುಗಿದೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..!

ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಮನೆ ಮತ್ತು ಅಂಗಡಿಗಳ ಕಳ್ಳತನ ಹೆಚ್ಚಾಗಿದೆ. ಇದರಿಂದ ನಗರದಲ್ಲಿ ನಿವಾಸಿಗಳು ಮತ್ತು ವ್ಯಾಪಾರಸ್ಥರು ಭಯದಲ್ಲಿ ದಿನಗಳು ಕಳೆಯುತ್ತಿದ್ದಾರೆ. ಕಳೆದ ರಾತ್ರಿಯೊಂದು ಅಂತಹದ್ದೆ ಭಯ ಪಡಿಸುವ ಘಟನೆಯೊಂದು ಜರುಗಿದ್ದು, ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು, ಲಕ್ಷಾಂತರು ಬೆಲೆಬಾಳುವ 53 ಮೊಬೈಲ್ ಗಳನ್ನು ಕದ್ದೊಯ್ದಿದ್ದಾರೆ. SRK ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು 27 ಹಳೆ ಪೋನ್, 15 ಹೊಸ ಬ್ರ್ಯಾಂಡೆಡ್ ಮೊಬೈಲ್‌ ಮತ್ತು ರಿಪೇರಿಗೆ ಕೊಟ್ಟಿದ್ದ 10 ಕಸ್ಟಮರ್ಸ್ ಮೊಬೈಲ್ ಒತ್ತಾಯ್ದಿದ್ದಾರೆ.

ಇನ್ನೂ ನಗರದ ಬಸ್ ನಿಲ್ದಾಣದ ಬಳಿ ಇರುವ ಮೊಬೈಲ್ ಅಂಗಡಿ ಬೀಗ ಮುರಿದು ಅಂಗಡಿ ಒಳಗೆ ನುಗ್ಗಿದ ಕಳ್ಳರ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಲೀಂ ಎಂಬುವವರ ಎಸ್.ಆರ್.ಕೆ ಮೊಬೈಲ್ ಅಂಗಡಿ ಕಳ್ಳತನವಾಗಿದ್ದು, ಅಚ್ಚರಿಯೆಂದರೆ ಇಬ್ಬರು ಖದೀಮ ಕಳ್ಳರು ಸಿಸಿ‌ ಕ್ಯಾಮೆರಾ ಬೇರೆಡೆ ತಿರುಗಿಸಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಅಂಗಡಿ‌ ಕಳ್ಳತನ ಮುಗಿಸಿ ಹೋಗುತ್ತಿದ್ದ ವೇಳೆ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕೂಡಾ ಹೊತ್ತೊಯ್ದಿದ್ದಾರೆ.

ಮೊಬೈಲ್ ಅಂಗಡಿ ಅಷ್ಟೇ ಅಲ್ಲದೆ ಅದೇ ಏರಿಯಾದಲ್ಲಿ ಇನ್ನೂ ಎರಡು ಕಡೆ ಕಳ್ಳತನ ಮಾಡಿದ್ದು. ಒಂದು ಬೈಕ್ ಹಾಗೂ ಮನೆಯಲ್ಲಿದ್ದ ಒಂದು ಲ್ಯಾಪ್ ಟಾಪ್ ಕಳ್ಳತನವಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದ ಅಧಿಕಾರಿಗಳು ಮೊಬೈಲ್ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಸೆರೆ ಹಿಡಿಯಬೇಕು ಎಂಬುದು ನಿವಾಸಿಗಳ ಪರ್ಯಾಯವಾಗಿದೆ.


[ays_poll id=3]