
K2 ನ್ಯೂಸ್ ಡೆಸ್ಕ್ : ರೈಲು ಹಳಿ ದಾಟುತ್ತಿದ್ದ ವೇಳೆ ಗೂಡ್ಸ್ ರೈಲು ಬಂದ ಹಿನ್ನೆಲೆಯಲ್ಲಿ ಅಳಿಯ ನಡುವೆ ರೈಲಿನ ಕೆಳಗೆ ಮಲಗಿ ಪ್ರಾಣ ಉಳಿಸಿಕೊಂಡ ಮುಖ್ಯ ಶಿಕ್ಷಕ. ನೆರೆದವರು ಬೇಕಿತ್ತಾ ಸರ್ ನಿಮಗೆ ಅಂತ ಪ್ರಶ್ನೆ ಕೇಳಿದ್ದಾರಂತೆ.
ಮಕ್ಕಳಿಗೆ ಪಾಠ ಹೇಳುವ ಶಿಕ್ಷಕನೇ ಇಂದು ಎಡವಟ್ಟು ಮಾಡಿಕೊಂಡ ಘಟನೆ, ದಾವಣಗೆರೆ ರೈಲು ನಿಲ್ದಾಣದಲ್ಲಿ ನಡೆದಿದೆ. ಬಿ.ದುರ್ಗದಲ್ಲಿ ಮುಖ್ಯಶಿಕ್ಷಕನಾಗಿದ್ದ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಪ್ಲಾಟ್ ಫಾರಂ 1 ರಿಂದ ಪ್ಲಾಟ್ ಫಾರಂ 2 ಕ್ಕೆ ಹೋಗುವ ವೇಳೆ, ಆ ಕಡೆ ಈ ಕಡೆ ನೋಡದೇ ಹಳಿ ದಾಟಲು ಮುಂದಾದಾಗ ಗೂಡ್ಸ್ ರೈಲು ಬಂದಿದೆ.
ಈ ವೇಳೆ ಹಳಿಯ ನಡುವೆ ಹಳಿಯ ನಡುವೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ ಶಿಕ್ಷಕ. ರೈಲಿನಡಿ ಇದ್ದ ಶಿಕ್ಷಕನನ್ನು ನೋಡಿದ ಸಿಬ್ಬಂದಿಗಳು ರೈಲನ್ನು ನಿಲ್ಲಿಸಿ, ಕೂಡಲೇ ಸ್ಥಳಕ್ಕೆ ಬಂದ ಆರ್ ಪಿ ಎಫ್ ಸಿಬ್ಬಂದಿಗಳು ರೈಲಿನ ಕೆಳಗೆ ಇದ್ದ ಶಿಕ್ಷಕನನ್ನು ರಕ್ಷಣೆ ಮಾಡಿದ್ದಾರೆ. ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![]() |
![]() |
![]() |
![]() |
![]() |
[ays_poll id=3]