ದೇವದುರ್ಗ : ಕಲಾವಿದರಿಗೆ ಆರ್ಥಿಕ ನೆರವಿನ ಅಗತ್ಯವಿದೆ,ಈ ನಿಟ್ಟಿನಲ್ಲಿ ಸರ್ಕಾರ ಬಡ ಕಲಾವಿದರಿಗೆ ಆರ್ಥಿಕ ನೆರವು ಒದಗಿಸಬೇಕು ಹಾಗೂ ಜನಪರ ಕಾಳಜಿಯುಳ್ಳವರು, ಜನಪ್ರತಿನಿದಿಗಳು ಕಲಾವಿದರಿಗೆ ಸಹಾಯ ಮಾಡಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಶ್ರೀ ಷ. ಬ್ರ. ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠ ಸುಲ್ತಾನಪುರ ಸ್ವಾಮಿಗಳು ಹೇಳಿದರು.
ಕಲಾವಿದರ ಸಹಾಯಾರ್ಥವಾಗಿ ದಿಗ್ಗಜರು ಎಂಬ ಅದ್ದೂರಿ ಸಾಂಸ್ಕೃತಿಕ,ಮನರಂಜನಾ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮಿ ಪ್ಯಾಲೀಸ್ ದೇವದುರ್ಗದಲ್ಲಿ ಜಿ. ಮುರುಗೇಂದ್ರ ಮಸರಕಲ್ ಹಾಗೂ ಚಲನಚಿತ್ರ ನಿರ್ಮಾಪಕ ಸಿದ್ದೇಶ ವೀರಕ್ತಮಠ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ,ಶ್ರೀ,ಷ. ಬ್ರ. ಅಭಿನವ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಿಖರಮಠ ದೇವದುರ್ಗ ವಹಿಸಿಕೊಂಡಿದರು, ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಹಾಗೂ ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
![]() |
![]() |
![]() |
![]() |
![]() |
[ays_poll id=3]