This is the title of the web page
This is the title of the web page
Local News

ಆರೋಗ್ಯವೇ ಮನುಷ್ಯನ ಸಂಪತ್ತು : ಜನರಿಗೆ ತಿಳುವಳಿಕೆ ಮೂಡಿಸಬೇಕಿದೆ


ದೇವದುರ್ಗ : ಆರೋಗ್ಯವೇ ಮನುಷ್ಯನ ಸಂಪತ್ತು ಆಗಬೇಕು ಎನ್ನುವ ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸಬೇಕಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಉತ್ತಮ ಆರೋಗ್ಯದ ಜತೆ ಜಾಗೃತ ಸಮಾಜ ನಿರ್ಮಾಣ ಮಾಡುವುದು ತುರ್ತು ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶ ಬಿ.ಕೆ.ನಾಗೇಶಮೂರ್ತಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ ಹಾಗೂ ಅಜಾಗರುಕತೆಯಿಂದ ಇಂದು ನಾನಾ ರೋಗಗಳು ಹರಡುತ್ತಿವೆ. ಏಡ್ಸ್ ನಿರ್ಮೂಲನೆಗೆ ಪಣ ತೊಟ್ಟಿರುವ ಆರೋಗ್ಯ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ. ಆರೋಗ್ಯ ಬಗ್ಗೆ ಮಹಿಳೆಯರು, ಮಕ್ಕಳು ಹಾಗೂ ಯುವಕರಿಗೆ ಅರಿವು ಮೂಡಿಸಬೇಕು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದ ರಕ್ತ ಪಡೆಯುವುದು, ಅಜಾಗುರಕತೆ ಚುಚ್ಚುಮದ್ದು ಬಳಕೆಯಿಂದ ಏಮ್ಸ್ ಹರಡಲಿದೆ. ಇಂದು ಜನರಲ್ಲಿ ಜಾಗೃತಿ ಮೂಡಿಸಿದ್ದು, ರೋಗ ದಿನೇದಿನೆ ಕಡಿಮೆಯಾಗುತ್ತಿದೆ. ಜನರು ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಜಾಗೃತಿವಹಿಸಿದರೆ ಎಂಥ ಕಾಯಿಲೆಯನ್ನಾದರೂ ನಿವಾರಣೆ ಮಾಡಬಹುದು.

ಹೀಗಾಗಿ ಜನರಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದೂ ಅಷ್ಟೇ ಮುಖ್ಯ. ಎಚ್‌ಐವಿ ನಿರ್ಮೂಲನೆಗೆ ಸರ್ಕಾರ ವಿವಿಧ ಕ್ರಮಕೈಗೊಂಡಿದ್ದು, ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಜತೆಗೆ ಧನಶ್ರೀ ಯೋಜನೆ, ಸತಿ ಯೋಜನೆ, ಮೈತ್ರಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಎಂದು ಹೇಳಿದರು.


[ays_poll id=3]