ರಾಯಚೂರು : ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಸಾಕಷ್ಟು ಮೊಸವಾಗುತ್ತಿದ್ದು, ಈ ಯೋಜನೆ ಮೋಸದ ಯೋಜನೆಯಾಗಿದ್ದು ಸರ್ಕಾರವೇ ರೈತರ ಸುಲಿಗೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಆರೋಪಿಸಿದರು.
ರೈತರು ಬೆಳೆ ವಿಮೆಯಿಂದ ಲಾಭವಿದೆ ಎಂದು ಪ್ರಿಮಿಯಂ ತುಂಬಿದರೆ ಪರಿಹಾರವನ್ನು ಭಿಕ್ಷೆಯ ರೂಪದಲ್ಲಿ ನೀಡಲಾಗುತ್ತಿದೆ. 1ಲಕ್ಷ 7ಸಾವಿರದ 59 ರೂ ಪರಿಹಾರ ನೀಡಬೇಕಾಗಿರುವುದು, ಆದರೆ ಪರಿಹಾರದ ಹಣ ಬಂದಿರುವುದು 1462 ರೂ.ಮಾತ್ರ ಬಂದಿದೆ ಇದರಿಂದ ರೈತರಿಗೆ ದಿಕ್ಕುಗಾಣದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಮೆ ಕಂತು ಕಟ್ಟಿಸಿಕೊಳ್ಳುವ ಬಣ್ಣದ ಮಾತುಗಳನ್ನಾಡಲು ವಿಶೇಷ ಸಭೆಗಳನ್ನು ನಡೆಸಲು ಆತುರ ತೋರುವ ಕೃಷಿ ಇಲಾಖೆ ಅಧಿಕಾರಿಗಳು ಈಗ ವಿಮೆ ಹಣ ಬರದಿರುವಾಗ ಸಮಸ್ಯೆಗಳು ಎದುರಾದಾಗ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.
ಜೀವವಿಮೆ ಅಧಿಕಾರಿಗಳನ್ನು ಕೇಳಿದರೆ ವಿಳಂಬ ನೀತಿ ಅನುಸರಿಸುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ. ಕೆಲ ರೈತರಿಗೆ ಸಂಬಂಧವಿಲ್ಲ ಎಂದು ಹೇಳುವ ಕೃಷಿ ಅಧಿಕಾರಿಗಳು ವಿಮೆ ಕಂತು ಕಟ್ಟುವಂತೆ ಹಳ್ಳಿಗಳಲ್ಲಿ ಜಾಗೃತಿ ಏಕೆ ಮೂಡಿಸುತ್ತಾರೆ. ಇದರಲ್ಲಿ ಅವರಿಗೂ ಪಾಲು ಇದೆಯಾ? ಎಂದು ಪ್ರಶ್ನಿಸಿದ ಅವರು, ಇದೆಲ್ಲವನ್ನು ಗಮನಿಸಿದಾಗ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಮೋಸದ ಯೋಜನೆಯಾಗಿದೆ ಎಂದು ಹರಿಹಾಯ್ದರು.
![]() |
![]() |
![]() |
![]() |
![]() |
[ays_poll id=3]