This is the title of the web page
This is the title of the web page

archive

Local News

ಈ ಭಾಗದ ಹೋರಾಟ, ಬದುಕಿಗೆ ಮಾಧ್ಯಮಗಳು ಧ್ವನಿಯಾಗಿರುವುದು ಸ್ಫೂರ್ತಿ

ಲಿಗಸುಗೂರು: 371 (ಜೆ ) ಸಂಪೂರ್ಣ ಫಲ ಸಿಗುತ್ತಿಲ್ಲ. ಸರ್ಕಾರ ಮೀನಾಮೇಷಗಳನ್ನು ಎಣಿಸದೆ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಾಕಷ್ಟು ಸಂಪನ್ಮೂಲಗಳಿದ್ದರೂ ಅವುಗಳ ಲಾಭ ಬೇರೆ ಜನ ಪಡೆದುಕೊಳ್ಳುತ್ತಿದ್ದಾರೆ. ಈ ಭಾಗದ ಎಲ್ಲ ಹೋರಾಟಗಳ ಬದುಕಿಗೆ ಮಾಧ್ಯಮಗಳು ಧ್ವನಿಯಾಗಿ ನಿಲ್ಲುತ್ತಿರುವುದು ನಮಗೆ ಸ್ಫೂರ್ತಿಯಾಗಿದೆ ಎಂದು ಸಾಹಿತಿ ವೀರಹನುಮಾನ ಹೇಳಿದರು. ಜಿಲ್ಲೆಯಲ್ಲಿ ಸಮೃದ್ಧ ಸಂಪನ್ಮೂಲಗಳಿವೆ. ಎರಡು ನದಿಗಳು ಹರಿಯುತ್ತಿವೆ. ಆದರೂ ನೀರಿನ ದಾಹ ತೀರಿಸಲಾಗುತ್ತಿಲ್ಲ. ಏರುತ್ತಿರುವ ಬಿಸಿಲಿನ ತಾಪವಿದೆ, ಬತ್ತಿದ ಕೆರೆಗಳು , ಬಡತನ , ದಾರಿದ್ರ್ಯ ನಮ್ಮ ಜೊತೆಯಲ್ಲಿಯೇ ನೆಲೆಯಾಗಿವೆ. ಕೃಷಿಗೆ ಅದರಲ್ಲೂ ಹತ್ತಿ , ಭತ್ತಕ್ಕೆ ಹೆಸರಾದ ನಮ್ಮ ಜಿಲ್ಲೆ ಆ ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿಲ್ಲ. ರೈತರ ಬಾಳನ್ನು ಹಸನು ಮಾಡುವ , ಆತ ಹೆಮ್ಮೆಯಿಂದ ಬಾಳುವ ಪರಿಸ್ಥಿತಿ ನಿರ್ಮಾಣವಾಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ...
Health & Fitness

ಈ ವಸ್ತುಗಳೊಂದಿಗೆ ಯಾವುದೇ ಕಾರಣಕ್ಕೂ ನೇರಳೆ ಹಣ್ಣು ತಿನ್ನಬೇಡಿ..!

K2 ಹೆಲ್ತ್ ಟಿಪ್ : ಹೆಚ್ಚು ಪೋಷಕಾಂಶಗಳನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು ನೇರಳೆ ಹಣ್ಣು. ಆದರೆ ಈ ಹಣ್ಣಿನೊಂದಿಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ತಿನ್ನಬಾರದು ಅದರಿಂದ ಅನಾರೋಗ್ಯಕ್ಕೂ ಈಡಾಗಬಹುದು. ನೇರಳೆ ಹಣ್ಣಿನಲ್ಲಿ ಅಡಗಿವೆ ಪೋಷಕಾಂಶಗಳು : ನೇರಳೆ ಹಣ್ಣು ನೋಡುವುದಕ್ಕೆ ಸಣ್ಣದಾಗಿರಬಹುದು. ಆದರೆ ಇದರಲ್ಲಿ  ಪೋಷಕಾಂಶಗಳ ಕೊರತೆಯಿರುವುದಿಲ್ಲ. ಇದನ್ನು ತಿಂದರೆ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತದೆ. ನೇರಳೆ ಹಣ್ಣಿನ ಪ್ರಯೋಜನಗಳು : ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು  ತಡೆಯಲು, ತೂಕ ನಷ್ಟಕ್ಕೆ  ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು. ಉಪ್ಪಿನಕಾಯಿ ಉಪ್ಪಿನಕಾಯಿ ತಿನ್ನುವುದರಿಂದ ಆಹಾರದ ರುಚಿ ಹೆಚ್ಚುತ್ತದೆ.  ನೇರಳೆ...
State News

ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ: ಮುಖ್ಯಮಂತ್ರಿ

K2 ನ್ಯೂಸ್ ಡೆಸ್ಕ್ : ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಯಾವುದು ಅಸಾಧ್ಯವಲ್ಲ. ಎಲ್ಲವೂ ಸಾಧ್ಯ. ಆತ್ಮವಿಶ್ವಾಸ ಇರಬೇಕು. ನಿಮ್ಮ ಮೇಲೆ ವಿಶ್ವಾಸ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಒಂದು ಸಂಸ್ಥೆಗೆ 150 ವರ್ಷ ಆಗುತ್ತಿದೆ ಎಂದರೆ ಅದು ಒಂದು ಇತಿಹಾಸ. ಒಬ್ಬ ಮನುಷ್ಯನಿಗೆ ನೂರು ವರ್ಷ ವಯಸ್ಸು ಆಗಬಹುದು. ಆದರೆ ಒಂದು ಸಂಸ್ಥೆ 150 ವರ್ಷವಾದರೆ ಇಲ್ಲಿ ಕಲಿತವರು ಯಾವ ಯಾವ ಸ್ಥಾನದಲ್ಲಿದ್ದಾರೆ ಅನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಸ್ವತಂತ್ರ ಪೂರ್ವದ ಚಿತ್ರವನ್ನು ನಾವು ನೆನಪು ಮಾಡಿಕೊಂಡರೆ, ಆಗ ಶಾಲೆಗಳ ಸಂಖ್ಯೆ ಬಹಳ ವಿರಳ. ಹೀಗಾಗಿ ಅವತ್ತಿನ ನಮ್ಮ ಹಿರಿಯರು ಬಹಳ ದೂರದೃಷ್ಟಿ ಇಟ್ಟುಕೊಂಡು, ಪ್ರಗತಿಪರ ವಿಚಾರವನ್ನಿಟ್ಟುಕೊಂಡು ಈ ಶಾಲೆ ಪ್ರಾರಂಭ ಮಾಡಿದ್ದಾರೆ. ಆ ಶಾಲೆ ಪ್ರಾರಂಭ ಮಾಡಿದ ಹಿರಿಯರಿಗೆ, ಇಲ್ಲಿ ಬಂದು ವಿಧ್ಯರ್ಜನೆ ಮಾಡಿದ ಶಿಕ್ಷಕರಿಗೆ, ಮೊದಲು ವಿದ್ಯಾಭ್ಯಾಸ ಮಾಡಿದ...
Local News

ಮಲ್ಲಿಕಾರ್ಜುನ್ ಖರ್ಗೆ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ

ರಾಯಚೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಸರ್ವಾಗಿಣ ಅಭಿವೃದ್ಧಿಗಾಗಿ 371ಜೆ ವಿಷೇಶ ಸ್ಥಾನ ಮಾನ ಸಿಕ್ಕಿರುವುದು ಮಲ್ಲಿಕಾರ್ಜುನ್ ಖರ್ಗೇ ನಾಯಕತ್ವದ ಹೋರಾಟಕ್ಕೆ ಸಿಕ್ಕ ಫಲ ಎಂದು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ತಿಳಿಸಿದರು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನವೆಂಬರ್ 10ರಂದು ನಡೆಯುವ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ. ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರದ ಅವಧಿಯಲ್ಲಿ 371ಜೆ ಅನುಮೋದಿಸಲು ಸಾದ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅನುಮೋದಿಸಿ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ ಹಾಗಾಗಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವರಿಗೆ ಅಭಿನಂದಿಸಬೇಕೆಂದು ತಿಳಿಸಿದರು. ನಂತರ ಬಿ.ವಿ ನಾಯಕ್...
1 3 4 5
Page 5 of 5