
K2 ನ್ಯೂಸ್ ಡೆಸ್ಕ್ : ನೂತನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಕೂಡ ಇದುವರೆಗೂ ಶಾಲೆಗಳಿಗೆ ಪಠ್ಯ ಪರಿಸ್ಕೃತ ಆದೇಶದ ಕಾಪಿಗಳು ಇರುವಂತಹ ಕೈಪಿಡಿಗಳು ಶಾಲೆಗಳ ಕೈ ಸೇರಿಲ್ಲ ಇದರಿಂದ ಶಿಕ್ಷಕರು ಗೊಂದಲದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಹೌದು ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಾಡಿದ್ದರೂ ಪರಿಷ್ಕೃತ ಆದೇಶದ ಕಾಪಿಗಳು, 140 ಪುಟದ ಕೈಪಿಡಿಗಳು ಶಾಲೆಗಳ ಕೈ ಸೇರಿಲ್ಲ. ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದ್ದರಿಂದ ಶಿಕ್ಷಕರು ಕೂಡ ಯಾವ ಪಠ್ಯವನ್ನು ಬೋಧಿಸಬೇಕು ಅನ್ನುವ ಗೊಂದಲದಲ್ಲಿದ್ದಾರೆ. ಈ ಮಧ್ಯೆ ಶಾಲಾ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಹೊಸ ಪಠ್ಯಕ್ರಮದ ಸಾಫ್ಟ್ ಕಾಪಿಯನ್ನ ನೋಡಿಕೊಂಡು ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಂತೆ ಆದೇಶಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]