This is the title of the web page
This is the title of the web page
Local News

ರಾಜ್ಯ ಸ್ಥಾಯಿ ನಿಧಿ ಸಂಗ್ರಹ ಆಂದೋಲನ


ಸಿಂಧನೂರು : ಜನರ ಕೆಲಸವನ್ನು ಜನರ ಹಣದಿಂದಲೆ ಎಂಬ ತತ್ವದ ಮೇಲೆ ಬಹು ದಿನಗಳಿಂದಲೂ ಭಾರತ ದೇಶದ ಕ್ರಾಂತಿಕಾರಿ ಕಮ್ಯೂನಿಸ್ಟ್ ಚಳುವಳಿಯಲ್ಲಿ ಈ ಪದ್ದತಿಯನ್ನು ಅನುಸರಿಸಿಕೊಂಡು ಬದಲಾಗುತ್ತಿರುವ ಹಿನ್ನೆಲೆ ಸಿಪಿಐ(ಎಂಎಲ್)ರಾಜ್ಯಸಮಿತಿಯು ಪ್ರತಿ ವರ್ಷದಂತೆ ಈ ವರ್ಷವೂ 15 ದಿನಗಳ ಕಾಲ ಪಕ್ಷದ ಸ್ಥಾಯಿ ನಿಧಿ ಸಂಗ್ರಹ ಕಾರ್ಯಕ್ರಮ ಚಾಲನೆ ನಡೆಸಲಾಯಿತು.

ಸಿಂಧನೂರು ಎಪಿಎಂಸಿಯ ಮಾರುಕಟ್ಟೆಯ ಅಂಗಡಿ-ಮುಂಗಟ್ಟಿನಿಂದ ಈ ಒಂದು ಸ್ಥಾಯಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಮುಂದಾಳುಗಳು ಕಾರ್ಯಕರ್ತರು ಈ ಆಂದೋಲನದ ಅಂಗವಾಗಿ ನಿಧಿ ಸಂಗ್ರಹಿಸಲಿದ್ದಾರೆ. ಇದು ಅತ್ಯಂತ ಮಹತ್ವದ ಜನಪರ ರಾಜಕೀಯ ಹೋರಾಟಕ್ಕೆ ಬುನಾದಿಯಾಗಿದೆ. ದೇಶದಲ್ಲಿ 3 ರೈತ ವಿರೋಧಿ ಕಾಯ್ದೆಗಳನ್ನು ಸೋಲಿಸುವ ಐತಿಹಾಸಿಕ ರೈತ ಚಳವಳಿ ನಡೆಯಿತು. ಇದರಲ್ಲಿ ಕರ್ನಾಟಕ ರೈತ ಸಂಘ(AIKKS)ದ ಮೂಲಕ ನಾವು ಶಕ್ತಿ ಮೀರಿ ಪರಿಶ್ರಮ ಹಾಕಿದ್ದೇವೆ.

ಹಾಗೆಯೆ,ದುಡಿಯುವ ವರ್ಗದಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನಕ್ಕಾಗಿ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲೂ ಶಕ್ತಿ ಮೀರಿ ಹೋರಾಡುತ್ತಿದ್ದೇವೆ. 4 ಕಾರ್ಮಿಕ ಸಂಹಿತೆಗಳ ವಿರುದ್ದದ ಹೋರಾಟದಲ್ಲೂ ನಮ್ಮದೇ ಆದ ಗಟ್ಟಿಯಾದ ಪಾತ್ರವಿದೆ. ಕಾರ್ಪೊರೇಟ್ ಶಕ್ತಿಗಳ ಪರವಾದ ಕೇಂದ್ರ ಸರಕಾರದ ಎಲ್ಲಾ ನಡೆಗಳ ಕುರಿತು ಜನ ಜಾಗೃತಿ ಮೂಡಿಸುವ ಹೋರಾಟದಲ್ಲಿ ಮುಂದಿದ್ದೇವೆ. ಒಂದೇ ದೇಶ ಒಂದೇ ಪೋಲಿಸ್, ಏಕರೂಪ ನಾಗರಿಕ ಸಂಹಿತೆ ,ಅಗ್ನಿಪಥ್,CAA NPR NRC ಯ ವಿರುದ್ದದ ಜನ ಚಳುವಳಿಯಲ್ಲಿ ಸತತವಾಗಿ ತೊಡಗಿಸಿ ಕೊಂಡಿದ್ದೇವೆ. ಒಟ್ಟಾರೆ, ಮುಂಬರುವ ಕರ್ನಾಟಕ ವಿಧಾನ ಸಭೆ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿ! ಎಂಬ ಹೆಗ್ಗುರಿಯೊಂದಿಗೆ ಜನತೆಯ ಫ್ಯಾಸಿಸ್ಟ್ ವಿರೋಧಿ ರಂಗ ಕಟ್ಟುವ ರಾಜಕೀಯ ಸಂಕಲ್ಪ ನಮ್ಮದಾಗಿದೆ ಎಂದರು.


[ays_poll id=3]