This is the title of the web page
This is the title of the web page
National NewsVideo News

ಕಸ ಗುಡಿಸ್ತಿದ್ದ ಮಹಿಳೆ ಮೇಲೆ ಬಿದ್ದ ಅಕ್ಕಿ ಚೀಲಗಳು : ಮೈಜುಮ್ ಎನಿಸೋ ವೀಡಿಯೋ..!


K2kannadanews.in

Viral Video : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (Agricultural Produce Market Committee)ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಮೇಲೆ ಅಕ್ಕಿ ಚೀಲಗಳು ಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ಸಿಸಿ ಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸದ್ಯ ವೈರಲ್‌ ಆಗಿದೆ (Viral Video).

ಘಟನೆಯು ನವಿ ಮುಂಬೈಯ (Navi Mumbai) ವಾಶಿ ಎಪಿಎಂಸಿ (Vasi APMC)  ಮಾರುಕಟ್ಟೆ ಯಲ್ಲಿ ಮಹಿಳೆ ಕಸ ಬಳಿಯುತ್ತಿದ್ದಾಗ ಘಟನೆ ನಡೆದಿದೆ. ಕೂಡಲೇ ಸಮೀಪದಲ್ಲಿದ್ದ ಕಾರ್ಮಿಕರು ಸ್ಪಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಎಪಿಎಂಸಿ ಗೋಡೌನ್‌ಲ್ಲಿ (Godown) ಎರಡು ಕಡೆ ಅಕ್ಕಿ (Rice), ಧಾನ್ಯಗಳ ಚೀಲಗಳನ್ನು ಹೊಂದಿಸಿ ಇಡಲಾಗಿತ್ತು. ಇದ್ದಕ್ಕಿದ್ದಂತೆ ಹೊಂದಿಸಿಟ್ಟ ಚೀಲಗಳು ಮಹಿಳೆ (Fell on women) ಮೇಲೆ ಕುಸಿದು ಬಿದ್ದವು. ಅಂದಾಜು 30-40 ಚೀಲಗಳು ಮಹಿಳೆ ಮೇಲೆ ಬಿದ್ದವು. ಕೂಡಲೇ ಅಲ್ಲಿ ಇದ್ದ ಕಾರ್ಮಿಕರು (Workers) ಧಾವಿಸಿ ಬಂದು ಮಹಿಳೆಯನ್ನು ಕಾಪಾಡಿದ್ದಾರೆ (Saved). ತ್ವರಿತವಾಗಿ ಚೀಲಗಳನ್ನು ಬದಿಗೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ತ್ವರಿತವಾಗಿ ಸಾಹಾಯಕ್ಕೆ ಧಾವಿಸಿದ ಇತರ ಸಿಬಂದಿಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.


[ays_poll id=3]