This is the title of the web page
This is the title of the web page
Local NewsState News

ವೈಟಿಪಿಎಸ್ ಕೇಂದ್ರದ ಒಂದನೇ ವಿದ್ಯುತ್ ಘಟಕದ ದಾಖಲೆಯ ಉತ್ಪಾದನೆ..


K2kannadanews.in

ರಾಯಚೂರು : ಆಪಾದನೆ ಮಧ್ಯಯೂ YTPS 1ನೇ ಘಟಕ 800 ಮೆಗಾವಾಟ್‌(meghavat) ವಿದ್ಯುತ್‌ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ. 1ನೇ ವಿದ್ಯುತ್ ಘಟಕ(unit) 800 ಮೆಗಾವಾಟ್ ಉತ್ಪಾದನೆಯ ಸಾಧನೆ ವೈಟಿಪಿಎಸ್ ಅಧಿಕಾರಿಗಳ ಶಕ್ತಿ(strength) ಮತ್ತಷ್ಟು ಬಲಪಡಿಸಿದೆ.

100 ದಿನಗಳ(days) ಕಾಲ ನಿರಂತರ ಉತ್ಪಾದನೆ (Continuous production) ಮಾಡಿದ್ದು, ಹೆಚ್ಚಿನ ಉತ್ಪಾದನೆ ದಾಖಲಿಸಿದ್ದು ಅಧಿಕಾರಿಗಳ ವಲಯದಲ್ಲಿ ಸಂತಸ(happy) ದುಪ್ಪಟ್ಟು ಮಾಡಿದೆ. ಕೇವಲ ಬೇಸಿಗೆಲ್ಲಿ ವಿದ್ಯುತ್‌ ಉತ್ಪಾದಿಸುವ ಹೊಣೆ ಹೊರುತ್ತಿದ್ದ ಯರಮರಸ್ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಘಟಕಗಳ ಮೇಲೆ ಪ್ರಸಕ್ತ ವರ್ಷ(year) ಮಳೆಯ ವೈಫಲ್ಯದಿಂದ ಚಳಿಗಾಲದಲ್ಲಿಯೇ(winter) ವಿದ್ಯುತ್‌(Electricity) ಒದಗಿಸುವ ಒತ್ತಡವಿದೆ. ಆಗಾಗ ತಲೆದೋರುವ ತಾಂತ್ರಿಕ (technical) ಸಮಸ್ಯೆಗಳ ಮಧ್ಯೆಯೂ ವಿದ್ಯುತ್‌ ಉತ್ಪಾದಿಸುತ್ತಿದ್ದು, ಒತ್ತಡ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡಿದೆ. ನಿರಂತರ ವಿದ್ಯುತ್‌ ಉತ್ಪಾದನೆ ಸಾಧ್ಯವಿಲ್ಲ ಎಂಬ ಆರೋಪದ ನಡುವೆಯೂ ಪ್ರಸ್ತಿತ ವರ್ಷದಲ್ಲಿ ನ.29ರ ವರೆಗೆ ಒಟ್ಟು 43.270 ದಶಲಕ್ಷ ಯೂನಿಟ್‌ ಉತ್ಪಾದನೆಯಾಗಿದೆ.

2016ರ ಡಿಸೆಂಬರ್‌ನಲ್ಲಿ ವೈಟಿಪಿಎಸ್‌ನಲ್ಲಿ ಎರಡು ಆಂಭವಾದ ಉತ್ಪಾದನಾ ಘಟಕಗಳು. ತಲಾ ಒಂದು ಘಟಕ 800 ಮೆಗಾವಾಟ್‌ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 2022ರ ಮಾರ್ಚ್‌ನಿಂದ ಏಪ್ರಿಲ್ 29ವರೆಗೆ 52 ದಿನ ನಿರಂತರ ಕಾರ್ಯನಿರ್ವಹಿಸಿ 400 ಮೆಗಾವಾಟ್ ಉತ್ಪಾದನೆ ಮಾಡಿದೆ. ಈ ಬಾರಿಯ ಉತ್ಪಾದನೆಯು 800 ಮೆಗಾವಾಟ್‌ ದಾಟಿದೆ ಎಂದು ವೈಟಿಪಿಎಸ್‌ ಮೂಲಗಳು ತಿಳಿಸಿವೆ.


[ays_poll id=3]