
K2 ನ್ಯೂಸ್ ಡೆಸ್ಕ್ : ಅಭಿವೃದ್ಧಿಯಲ್ಲಿ ಕುಂಟಿತವಾಗಿರುವ ರಾಯಚೂರು ನಗರದ ಸಮಗ್ರ ಅಭಿವೃದ್ದಿಗಾಗಿ ಹೊಸ ವಿನ್ಯಾಸದ ವರದಿಯನ್ನ ಲಿಯಾ ಕನ್ಸಲ್ಟೆಂಟ್ಸ್ ಸಣ್ಣ ನೀರಾವರಿ ಎನ್.ಎಸ್.ಬೋಸರಾಜ್ ಅವರಿಗೆ ಪ್ರಸ್ತುತ ಪಡಿಸಿದ್ದಾರೆ.
ನಗರದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯದ ಬೆಳವಣಿಗೆಗೆ ಯೋಜನಾಬದ್ದ ನೀಲಿನಕ್ಷೆಯನ್ನು ಒಳಗೊಂಡಂತಹ ಪ್ರಾಥಮಿಕ ಹಂತದ ಪರಿಷ್ಕೃತ ಮಾಸ್ಟರ್ ಪ್ಲಾನ್ ನ ಪ್ರಾಥಮಿಕ ಹಂತದ ವರದಿಯನ್ನು ಅಂತರಾಷ್ಟ್ರೀಯ ಲಿಯಾ ಕನ್ಸಲ್ಟೆಂಟ್ಸ್ ನೀಡಿದ್ದಾರೆ. ಈ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸುವಂತೆ ಸೂಚಿಸಿದ್ದು, ಎರಡನೇ ವರದಿಯನ್ನ ಸನ್ಮಾನ್ಯ ಮುಖ್ಯಮಂತ್ರಿಗಳು, ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ನಗರ ಯೋಜನೆಯಲ್ಲಿ ಪರಿಣತಿಯನ್ನು ಪಡೆದುಕೊಂಡಿರುವ ಲಿಯಾ ಕನ್ಸಲ್ಟೆಂಟ್ಸ್ ಅವರು ಎರಡು ವಾರಗಳ ಕಾಲ ರಾಯಚೂರು ನಗರದಲ್ಲಿ ಕೈಗೊಂಡ ಪರಿಶೀಲನೆ ನಂತರ ನೀಡಿದ ಪ್ರಾಥಮಿಕ ಹಂತದ ವರದಿಯನ್ನು ಪರಿಶೀಲಿಸಿ ಮಾತನಾಡಿದರು. ಲಿಯಾ ಕನ್ಸಲ್ಟೆಂಟ್ಸ್ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ಸಂಸ್ಥೆಯು ವಿಶ್ವದ ಉತ್ತಮ ವಾಸ್ತುಶಿಲ್ಪಿಗಳನ್ನು ಹೊಂದಿದೆ. ಅಲ್ಲದೇ, ಅನೇಕ ದೇಶಗಳು ಮತ್ತು ಭಾರತ ದೇಶದ ಹಲವಾರು ನಗರಗಳ ಪರಿಷ್ಕೃತ ಯೋಜನೆಯನ್ನು ತಯಾರಿಸಿಕೊಟ್ಟಿದೆ. ಹಾಗೆಯೇ, ನಮ್ಮ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಮಾಲೋಚನಾ ಸೇವೆಯನ್ನು ನೀಡುತ್ತಿದೆ.
ಏಮ್ಸ್ ರಾಯಚೂರಿಗೆ ಬರುವ ಸಾಧ್ಯತೆಯಿದ್ದು, ಇದಕ್ಕೆ ಪೂರಕವಾಗಿ ನಮ್ಮ ಪರಿಷ್ಕೃತ ನಗರ ಯೋಜನೆಯಲ್ಲಿ ಏಮ್ಸ್ ಹೆಲ್ತ್ ಸಿಟಿಗೆ ಅವಕಾಶ ನೀಡುವಂತೆ ಸಚಿವರು ಸೂಚನೆ ನೀಡಿದರು. ವಿಷನ್ ರಿಬೂಸ್ಟಿಂಗ್ ರಾಯಚೂರು-2045ರ ಗುರಿಯನ್ನಿಟ್ಟುಕೊಂಡು ಮುಂದಿನ ಹಂತದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]