
K2 ಪೊಲಿಟಿಕಲ್ ನ್ಯೂಸ್ : ನಾಯಕ ಸಮುದಾಯಕ್ಕೆ ನೀಡಿರುವಂತಹ 7.5 ಮೀಸಲಾತಿ, ಶೆಡ್ಯೂಲ್ 9ಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಲಾಯಿತು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳಾದ ಪ್ರಸನ್ನಾನಂದ ಸ್ವಾಮೀಜಿ ಮತ್ತು ಸಮುದಾಯದ 14 ಜನ ಶಾಸಕರನ್ನೊಳಗೊಂಡ ಮುಖಂಡರೊಂದಿಗೆ ಸಭೆ ಮಾಡಲಾಯಿತು. 7.5 ಮೀಸಲಾತಿ, ಶೆಡ್ಯೂಲ್ 9ಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳು ವಿಚಾರದ ಬಗ್ಗೆ ಸರ್ಕಾರದೊಂದಿಗೆ ಮತ್ತು ಕ್ಯಾಬಿನೆಟ್ ಸಮಿತಿಯಲ್ಲಿ ಚರ್ಚೆ ಮಾಡುವ ಭರವಸೆಯನ್ನು ನೀಡಿ ಮುಂದಿನ ದಿನಗಳಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಈ ವೇಳೆ ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕರಾದ ಜಿ ಕರಿಯಮ್ಮ ನಾಯಕ್ ಮತ್ತು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಹಾಗೂ ಮಾನವಿ ಶಾಸಕ ಹಂಪಯ್ಯ ನಾಯಕ್ ಅವರು ಕೂಡ ಈ ಒಂದು ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ k2 ಕನ್ನಡ ನ್ಯೂಸ್ ಜೊತೆ ಮಾತನಾಡಿದ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು, 7.5 ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶೆಡ್ಯೂಲ್ 9ಗೆ ಸೇರಿಸುವ ಮೂಲಕ, ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆಯಬೇಕು, ಸೇರಿದಂತೆ ಸಮುದಾಯಕ್ಕೆ ವಿವಿಧ ನಿಗಮಗಳಿಗೆ ಹೆಚ್ಚಿನ ಅನುದಾನ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತುಕತೆ ನಡೆಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರ ತರಾತುರಿಯಲಿ ಶೆಡ್ಯೂಲ್ 9ಗೆ ಸೇರಿಸದೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಬಗ್ಗೆ ನಾವು ಮತ್ತೊಮ್ಮೆ ಅದರ ಬಗ್ಗೆ ಮಾಹಿತಿ ಪಡೆದು ಶೆಡ್ಯೂಲ್ಡ್ 9ಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]