
K2 ನ್ಯೂಸ್ ಡೆಸ್ಕ್ : ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3ರ ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ತನ್ನ ಕಾರ್ಯಾಚರಣೆ ಮುಗಿಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಹೌದು ಇದೀಗ ಪ್ರಗ್ಯಾನ್ ರೋವರ್ನ ಅಸೈನ್ಮೆಂಟ್ಗಳು ಮುಗಿದಿದ್ದು, ಸುರಕ್ಷಿತವಾಗಿ ಒಂದು ಕಡೆ ನಿಲ್ಲಿಸಿದ್ದು, ವಿಶ್ರಾಂತಿಗೆ ಜಾರಿದೆ. ಜೊತೆಗೆ APXS ಮತ್ತು LIBS ಪೇಲೋಡ್ಗಳು ಕೂಡ ಟರ್ನ್ ಆಫ್ ಆಗಿದ್ದು, ಅಲ್ಲಿನ ಡೇಟಾ, ಲ್ಯಾಂಡರ್ ಮೂಲಕ ಭೂಮಿಗೆ ರವಾನೆ ಆಗಲಿದೆ ಅಂತ ಇಸ್ರೋ ತಿಳಿಸಿದೆ. ಸದ್ಯ ಬ್ಯಾಟರಿ ಫುಲ್ ಚಾರ್ಜ್ ಆಗಿದೆ.
ಇನ್ನು ಸೆಪ್ಟೆಂಬರ್ 22ರಂದು ಆಗಲಿರುವ ಸೂರ್ಯೋದಯದ ಬೆಳಕನ್ನು ಗ್ರಹಿಸುವ ನಿಟ್ಟಿನಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನ ರೆಡಿಮಾಡಲಾಗಿದೆ. ಅದಕ್ಕಾಗಿ ರಿಸೀವರ್ ಕೂಡ ಆನ್ ಆಗಿದೆ. ಈಗಾಗಲೇ ಒಂದು ಸೆಟ್ ಅಸೈನ್‌ಮೆಂಟ್ ಮುಗಿಸಿರೋ ರೋವರ್, ಇನ್ನೊಂದು ಸೆಟ್ ಅಸೈನ್ಮೆಂಟ್ಗಳು ಜಾಗೃತಗೊಳ್ಳುವ ಭರವಸೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಚಂದ್ರನ ಅಂಗಳದಲ್ಲಿ ಭಾರತದ ರಾಯಭಾರಿ ಆಗಿ ವಿಕ್ರಂ ಅಲ್ಲೇ ಇರಲಿದೆ ಅಂತ ಇಸ್ರೋ ತಿಳಿಸಿದೆ.
![]() |
![]() |
![]() |
![]() |
![]() |
[ays_poll id=3]