
K2 ನ್ಯೂಸ್ ಡೆಸ್ಕ್ : ಸರ್ಕಾರ ಯುವ ಜನರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಯೋಜನೆಗಳನ್ನು ತರುತ್ತದೆ. ಲಿಖಿಲ ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಯುವ ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಇದೇ ರೀತಿ ಪ್ಯಾರಾಮೆಡಿಕಲ್ ಕೋರ್ಸ್‌ಗೆ ಸೇರಿದ್ದ ವಿದ್ಯಾರ್ಥಿಗಳು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಪರದಾಡುತ್ತಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ರೂಪಿಸಿದ್ದ ವೆಬ್‌ಸೈಟ್ ಕೂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿಲ್ಲ.
ಕರ್ನಾಟಕ ನರ್ಸಿಂಗ್ & ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರದ ಪ್ಯಾರಾಮೆಡಿಕಲ್ ವೆಬ್‌ಸೈಟ್‌ನಲ್ಲಿ ಇರುವ ನಂಬರ್ ರಿಜಿಸ್ಟರ್ ಆಗಿಲ್ಲ ಎಂಬ ಆರೋಪ ಈಗ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ಹೀಗಾಗಿ ಕೋರ್ಸ್ ಸಂಬಂಧ ಈಗ ಯಾರನ್ನ ಸಂಪರ್ಕ ಮಾಡಬೇಕು ಅಂತಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದರ ಜೊತೆ ಅದೇ ವೆಬ್‌ಸೈಟ್ ನೀಡಿರುವ ಮುಖ್ಯಸ್ಥರ ಹೆಸರುಗಳ ಕೆಳಗೆ ಅವರ ಸಂಪರ್ಕ ಮಾಹಿತಿ ಕೂಡ ಇಲ್ಲ. ಕೇವಲ ಹೆಸರನ್ನ ಮಾತ್ರ ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ದಾರಿ ಕಾಣದಾಗಿದೆ.
ಇದರ ಜೊತೆಗೆ ಕೋರ್ಸ್ ಕರೆದ ನಂತರ ನೋಟಿಫಿಕೇಷನ್ ನೀಡಬೇಕು, ಯಾವಾಗ ಕೋರ್ಸ್ ಶುರುವಾಗುತ್ತೆ ಮತ್ತು ಯಾವಾಗ ಕೋರ್ಸ್ ಮುಗಿಯುತ್ತೆ ಅನ್ನೋದನ್ನ ತಿಳಿಸಬೇಕಿತ್ತು. ಆದರೆ ಇದನ್ನೂ ಕರ್ನಾಟಕ ನರ್ಸಿಂಗ್ & ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ’ ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ಕೌನ್ಸಿಲಿಂಗ್ ಬಗ್ಗೆಯೂ ಇಲ್ಲಿಯ ತನಕ ಮಾಹಿತಿ ನೀಡಿಲ್ಲ. ವೆಬ್‌ಸೈಟ್ ಮೂಲಕ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, 2023 ಮತ್ತು 2024ರ ಕೌನ್ಸಿಲಿಂಗ್ ಲಿಂಕ್ ಎರರ್ ಬರ್ತಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.
ಒಟ್ಟಿನಲ್ಲಿ ಹೊಟ್ಟೆ, ಬಟ್ಟೆ ಕಟ್ಟಿ ಕೋರ್ಸ್‌ಗೆ ಸೇರಿರುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದೇ ರೀತಿ ಸಮಸ್ಯೆಗಳ ಸಾಗರವೇ ಇದ್ದರೂ ಕರ್ನಾಟಕ ನರ್ಸಿಂಗ್ & ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪ ಕೂಡ ಈಗ ಕೇಳಿಬರುತ್ತಿದೆ. ಹೀಗಾಗಿ ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕಿದೆ. ಅಕಸ್ಮಾತ್ ಹೀಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದರೆ, ಉಗ್ರ ಹೋರಾಟ ನಡೆಸುವುದಾಗಿಯೂ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]