
ರಾಯಚೂರು : ಮನುಷ್ಯ ಜೀವಿಸಲು ಅತ್ಯವಶ್ಯವಾಗಿ ಬೇಕಾದ ಜೀವಜಲವೇ ಇಲ್ಲಿನ ಜನರಿಗೆ ವಿಷಯವಾಗಿ ಪರಣಮಿಸಿದೆ. ಕೈಗಾರಿಕಾ ಪ್ರದೇಶ ನಿರ್ಮಾಣವಾದಾಗಿನಿಂದ ಈ ಭಾಗದ ನೀರು ಕುಡಿಯಲು ಯೋಗ್ಯವಲ್ಲ ಎಂದು ರಿಪೋರ್ಟ್ ಇದ್ದರೂ ಕೂಡ ಕ್ರಮ ಆಗುತ್ತಿಲ್ಲ, ಅದೇ ವಿಷಕಾರಿ ಕೆಮಿಕಲ್ ವೇಸ್ಟೇಜ್ ನೀರನ್ನ ನೀಡುತ್ತಿವೆ ಇಲ್ಲಿನ ಕೆಮಿಕಲ್ ಕಂಪನಿಗಳು. ಒಂದು ಕಡೆ ಅಧಿಕಾರಿಗಳಿಗೆ ಚೆಲ್ಲಾಟವಾದರೆ ಐದಾರು ಹಳ್ಳಿ ಗ್ರಾಮಸ್ಥರಿಗೆ ಪ್ರಾಣ ಸಂಕಟ ಎದುರಾಗಿದೆ. ನೀವೇನು ಅಧಿಕಾರಿಗಳಾ, ಇಲ್ಲಾ ಜೀವ ತೆಗೆಯುವ ರಾಕ್ಷಸರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ತಾಲ್ಲೂಕಿನ ವಡ್ಲೂರು ಗ್ರಾಮದ ಸುತ್ತ ಮುತ್ತಲಿರುವ ಶಿಲ್ಪಾ ಫಾರ್ಮಾ, ರಾಯ್ಕಮ್, ಜಯಂತಿ ಸೇರಿ ಹತ್ತಕ್ಕೂ ಹೆಚ್ಚು ಕೆಮಿಕಲ್ ಫ್ಯಾಕ್ಟರಿಗಳ ವಿಷಕಾರಿ ವೇಸ್ಟೇಜ್ ನೀರು ಕೃಷ್ಣಾ ನದಿಗೆ ಸೇರುತ್ತದೆ. ತಾಲ್ಲೂಕಿನ ಗಡಿ ಭಾಗದ ಹಳ್ಳಿಗಳಾದ ಗುಂಜಳ್ಳಿ, ಹನುಮನದೊಡ್ಡಿ, ವಡ್ಲೂರು ಸೇರಿ ನಾಲ್ಕೈದು ಹಳ್ಳಿಗಳಿಗೂ ಇದೇ ವಿಷಕಾರಿ ನೀರು ಪೂರೈಸಲಾಗುತ್ತದೆ. ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಗಳಿಗೆ ಕೆಮಿಕಲ್ ವೇಸ್ಟೇಜ್ ನೀರು ಬೀಡಲಾಗುತ್ತಿದೆ. ಇದೇ ಕೃಷ್ಣಾ ನದಿಗೆ ಸೇರುವ ಕಲುಷಿತ ನೀರನ್ನ ಜನರಿಗೆ ಕುಡಿಯಲು ಅಧಿಕಾರಿಗಳು ಪೂರೈಕೆ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಈ ಕುರಿತಂತೆ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತದ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಮಾತ್ರ ಈ ನೀರನ್ನು ನಾವೇನಾದ್ರು ಕುಡಿತೀವಾ, ಕುಡಿಯೋದು ಸಾಮಾನ್ಯ ಜನಾ ತಾನೆ ಎಂಬಂತೆ ವರ್ತನೆ ತೋರುತಿದ್ದು, ಬಡ ಜನತೆಯ ಜೀವದ ಜೊತೆ ಆಟವಾಡುತ್ತಿರುವುದು ಕಂಡುಬಂದಿದೆ. ನಿನ್ನೆಯಷ್ಟೇ ಮತ್ತೆ ಕೆಮಿಕಲ್ ನೀರು ಹರಿಸಿರುವ ಹಿನ್ನೆಲೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮವೇ ಆಗಿದೆ. ಜಾನುವಾರುಗಳು ಸಾಯುತ್ತವೆ. ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕೈಗಾರಿಕಾ ಇಲಾಖೆಯಾಗಲಿ ಅಥವಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿವೆ.
![]() |
![]() |
![]() |
![]() |
![]() |
[ays_poll id=3]