
ಸಿಂಧನೂರು : ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಉಪಹಾರ ನೀಡದ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಾಸಕ ಹಂಪನಗೌಡ ಬಾದರ್ಲಿ ಅದೇ ಉಪಹಾರ ಅಧಿಕಾರಿಗಳಿಗೆ, ತಿನ್ನಿಸಿ ತರಾಟೆ ತೆಗೆದುಕೊಂಡ ನಡೆಗೆ ಪಾಲಕರು ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಿಂಧನೂರಿನ ಜೋಳದ ರಾಶಿ ಆಂಜನೇಯ ದೇವಸ್ಥಾನದ ಬಳಿ ಇರುವ, ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಗೆ ಇತ್ತೀಚಿಗೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ವಿದ್ಯಾರ್ಥಿಗಳು ಸಾಲು ಸಾಲು ದೂರುಗಳನ್ನು ಶಾಸಕರಿಗೆ ನೀಡಿದರು. ಉಪಹಾರ ಸಮಯ ಆಗಿದ್ದರಿಂದ ಅಲ್ಲಿ ಉಪಹಾರ ಗುಣಮಟ್ಟ ಪರೀಕ್ಷಿಸಲು ಶಾಸಕರು ಉಪಹಾರ ಸೇವಿಸಿ, ತಹಸಿಲ್ದಾರಿಂದ ಹಿಡಿದು ಹಾಸ್ಟೆಲ್ ವಾರ್ಡನ್ ಗಳವರೆಗೆ ಎಲ್ಲಾ ಅಧಿಕಾರಿಗಳಿಗೂ ಅದೇ ಉಪಹಾರ ಸೇವಿಸಲು ತಿಳಿಸಿದರು.
ಉಪಹಾರಕ್ಕೆ ಮಂಡಾಳು ಒಗ್ಗರಣೆಗೆ ಮಾಡಲಾಗಿತ್ತು, ಆದರೆ ಆ ಒಂದು ಉಪಹಾರದಲ್ಲಿ ಮೆಣಸಿನಕಾಯಿ, ಟೊಮ್ಯಾಟೋ, ಈರುಳ್ಳಿ ಯಂತಹ ಯಾವುದೇ ತರಕಾರಿಗಳನ್ನು ಹಾಕದೆ ಮಾಡಿದ್ದರಿಂದ, ಅಸಮಾಧಾನಗೊಂಡ ಶಾಸಕರು ಅಡುಗೆ ಮಾಡುವ ಸಿಬ್ಬಂದಿಗಳಿಂದ ಹಿಡಿದು ವಾರ್ಡನ್‌ಗಳವರೆಗೆ ತರಾಟೆಗೆ ತೆಗೆದುಕೊಂಡು ಅಸಮಾಧಾನ ಹೊರ ಹಾಕಿದರು.
![]() |
![]() |
![]() |
![]() |
![]() |
[ays_poll id=3]