
K2 ನ್ಯೂಸ್ ಡೆಸ್ಕ್ : ನಾಳೆಯಿಂದ ರಾಜ್ಯದ ಗ್ರಾಹಕರಿಗೆ ಎರಡು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಒಂದು ಕಡೆ ಹಾಲಿನ ಬೆಲೆ ರೂ.3 ಏರಿಸಿದರೆ ಮತ್ತೊಂದು ಕಡೆ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಜಾರಿ ಮಾಡುತ್ತಿವೆ. ಹೋಟೆಲ್ ಮಾಲೀಕರ ಸಂಘ ಈ ಒಂದು ನಿರ್ಧಾರ ಪಡೆದರೆ, ಇತ್ತ ಸಿಎಂ ನೇತೃತ್ವದ ಸಭೆಯಲ್ಲಿ ನಂದಿನಿ ಹಾಲಿನ ಪ್ರತಿ ಲೀಟರ್ ದರವನ್ನು ರೂ.3 ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇನ್ನೊಂದು ಕಡೆ ಬೆಲೆಗಳನ್ನ ಹೆಚ್ಚು ಮಾಡುತ್ತಿದೆ. ಜುಲೈ ತಿಂಗಳು ಗ್ರಾಹಕರಿಗೆ ಕೆಟ್ಟ ತಿಂಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಗಗನಕ್ಕೆ ತರಕಾರಿ ಹಣ್ಣುಗಳ ಬೆಲೆ ಇದೀಗ ಹಾಲು ಹೋಟೆಲ್ ತಿಂಡಿಗಳ ಬೆಲೆಯೂ ಹೆಚ್ಚಾಗಿ ಗ್ರಾಹಕರ ಸಂಪೂರ್ಣ ಕತ್ತರಿ ಬೀಳುತ್ತಿದೆ.
ಈ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, KMF ನಿರ್ದೇಶಕ ಹೆಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡರು ಮತ್ತಿತರರು ಭಾಗವಹಿಸಿದ್ದರು.
ಯಾವ ಹಾಲಿನ ಬೆಲೆ ಎಷ್ಟು ಹೆಚ್ಚಾಗಿದೆ..?
1. ನಂದಿನಿ(ಟೋನ್ಡ್ ಹಾಲು)ಅರ್ಧ ಲೀಟರ್‌ಗೆ 23& ಒಂದು ಲೀಟರ್‌ಗೆ 43 ರೂ. ಆಗಲಿದೆ.
2. ನಂದನಿ(ಡಬಲ್ ಟೋನ್ಡ್ ಹಾಲು)ಅರ್ಧ ಲೀಟರ್‌ಗೆ 22 &1 ಲೀಟರ್‌ಗೆ 41ರೂ ಆಗಲಿದೆ.
3. ನಂದಿನಿ ಶುಭಂ ಅರ್ಧ ಲೀಟರ್‌ಗೆ 26& 1 ಲೀಟರ್‌ಗೆ 48ರೂ. ಆಗಲಿದೆ.
4. ನಂದಿನಿ ಸ್ಪೆಷಲ್ ಅರ್ಧ ಲೀಟರ್‌ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.
5. ನಂದಿನಿ ( ಸಮೃದ್ಧಿ) ಅರ್ಧ ಲೀಟರ್‌ಗೆ 27& ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.
6. ನಂದಿನಿ ಹಸುವಿನ ಹಾಲು ಅರ್ಧ ಲೀಟರ್‌ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.
![]() |
![]() |
![]() |
![]() |
![]() |
[ays_poll id=3]