
ಮೈ ಜುಮ್ಮೆನಿಸುವ ವಿಡಿಯೋ : ಶುದ್ಧ ಪ್ರೀತಿಯ ಸಂಕೇತ
K2 ನ್ಯೂಸ್ ಡೆಸ್ಕ್ : ಮುಕ್ಕೋಟಿ ದೇವತೆಯ ಪ್ರತಿಕವೇ ಹಸು ಎಂದು ಹೇಳಲಾಗುತ್ತದೆ. ಹಸುವಿನ ಪ್ರೀತಿ ನಿಷ್ಕಲ್ಮಶ. ಎಂಥಾ ಕ್ರೂರಿಯಾದರೂ ಹಸುವಿನ ಪ್ರೀತಿಗೆ ತಲೆಬಾಗಲೇಬೇಕು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ವಿಡಿಯೋ ಹಂಚಿ, “ವಿವರಿಸಲು ಕಷ್ಟ. ಶುದ್ಧ ಪ್ರೀತಿಯ ಮೂಲಕ ಗಳಿಸಿದ ವಿಶ್ವಾಸ” ಎಂದು ಬರೆದಿದ್ದಾರೆ.17 ಸೆಕೆಂಡ್‌ಗಳ ವೀಡಿಯೊದಲ್ಲಿ ಹೆಡೆ ಬಿಚ್ಚಿದ ನಾಗರ ಹಾವನ್ನು ಹಸು ಕರುವನ್ನು ನೆಕ್ಕುವಂತೆ ನೆಕ್ಕಿರುವುದು ಕಂಡು ಬರುತ್ತದೆ. ಹಾವು ಭುಸುಗುಡದೆ ಹಸುವಿನ ಮುದ್ದಾಟಕ್ಕೆ ತಲೆದೂಗಿದಂತೆ ವಿಡಿಯೋದಲ್ಲಿ ಕಾಣುತ್ತದೆ.
Difficult to explain. The trust gained through pure love 💕 pic.twitter.com/61NFsSBRLS
— Susanta Nanda (@susantananda3) August 3, 2023
ಹಸು ಹಾವನ್ನು ನೆಕ್ಕುತ್ತಿರುವ ದೃಶ್ಯ ಮೈ ನೋಡುಗರ ಜುಮ್ಮೆನಿಸುವಂತಿದೆ. ಆದರೆ, ಅವುಗಳು ಯಾವುದೇ ಭೀತಿ ಆತಂಕವಿಲ್ಲದೆ ಸಹಜವಾಗಿ ಆಟವಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಪ್ರಾಣಿ ಪ್ರಪಂಚ ವಿಚಿತ್ರಗಳ ಬಗ್ಗೆ ಚರ್ಚೆ ನಡೆಸಿದ್ದು, ಈ ವಿಡಿಯೋ ಬಗ್ಗೆ ಪರ ವಿರೋಧದ ಚರ್ಚೆಯಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]