
K2 ಕ್ರೈಂ ನ್ಯೂಸ್ : ಸರ್ಕಾರಿ ಶಾಲೆಯ ಬಿಸಿ ಊಟ ಕೋಣೆಗಳನ್ನು ಇನ್ನು ಮುಂದೆ ಭದ್ರತೆ ಮಾಡಬೇಕಾಗಿದೆ. ಹೌದು ಇಂತದೊಂದು ವಿಚಿತ್ರ ಘಟನೆ ಎಂದು ಬೆಳಕಿಗೆ ಬಂದಿದೆ. ಮಕ್ಕಳನ್ನು ಶಾಲೆಗೆ ಸೆಳೆಯಲು ಸರ್ಕಾರ ನೀಡುತ್ತಿರುವ ಬಿಸಿ ಊಟದ ಸಾಮಗ್ರಿಗಳನ್ನು ಕದ್ದು ಮಕ್ಕಳ ಊಟಕ್ಕೂ ಕನ್ನ ಹಾಕಿದ ಕಳ್ಳರು.
ಹೌದು ನಿಜಕ್ಕೂ ಇಂತದೊಂದು ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಬೀದರ್ ನಲ್ಲಿ. ಹುಲಸೂರ ತಾಲೂಕಿನ ಬೇಲೂರು ಸರ್ಕಾರಿ ಶಾಲೆ ಗೋಡೌನ್‍ಗೆ ಕನ್ನ ಹಾಕಿದ ಖದೀಮರು, ಅಲ್ಲಿನ ಸಾಮಗ್ರಿಗಳನ್ನು ಕದ್ದಿದ್ದಾರೆ. ಗೋಡೌನ್‍ನಲ್ಲಿದ್ದ ಎರಡು ಮೂಟೆಗಳನ್ನ ಹೊತ್ತೊಯ್ದ ಇಬ್ಬರು ಖದೀಮರು ಸಿಸಿ ಟಿವಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇಷ್ಟು ಭದ್ರತೆ ಇದ್ದರೂ ಸಹ ಕದಿಯಲು ಬಂದಿದ್ದಾರೆ.
ಈ ದೃಷ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ ಅವರು ಯಾರು ಎಂದು ಪತ್ತೆಹಚ್ಚಲಾಗುತ್ತದೆ. ಆದರೆ ಗ್ರಾಮಸ್ಥರು ಮಾತ್ರ ತೊಗರಿ ಬೇಳೆ ಬೆಲೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ, ಕದೀಮರು ತೊಗರಿ ಬೇಳೆ ಮೂಟೆಯನ್ನೇ ಕದ್ದಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]