This is the title of the web page
This is the title of the web page
Crime NewsState NewsVideo News

ತಾಯಿ- ಮಗಳ ಸೋಗಿನಲ್ಲಿ ಬಂದು ಚಿನ್ನದ ಸರ ಕದ್ದು ಪರಾರಿ..


K2kannadanews.in

Crime ನ್ಯೂಸ್ : ಚಿನ್ನದ ಅಂಗಡಿಗೆ ತಾಯಿ (Mother)- ಮಗಳ(Daughter) ಎಂದುಕೊಂಡು ಜ್ಯುವೆಲ್ಲರಿ ಅಂಗಡಿಗೆ ಬಂದ ಕಳ್ಳಿಯರು, ಚಿನ್ನ ಖರೀದಿಸುವ ನೆಪದಲ್ಲಿ 32 ಗ್ರಾಂ ಚಿನ್ನದ(gold) ಸರ (Chain) ಕದ್ದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು ತುಮಕೂರಿನ(Tumkuru) ಗುಂಚಿ ಸರ್ಕಲ್ ಬಳಿಯ SND ಜ್ಯುವೆಲ್ಲರಿ ಶಾಪ್‌ನಲ್ಲಿ ಈ ಘಟನೆ ಡಿಸೆಂಬರ್ 2ರಂದು ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಖತರ್ನಾಕ್ ಕಳ್ಳಿಯರ ಕೈಚಳಕದ ದೃಶ್ಯ ಸಿಸಿಟಿವಿ(CCTV) ಕ್ಯಾಮರಾದಲ್ಲಿ (CAMERA) ಸೆರೆಯಾಗಿದೆ.

ತಾಯಿ -ಮಗಳ ಸೋಗಿನಲ್ಲಿ ಓರ್ವ ಯುವತಿ(young women) ಹಾಗೂ ಮಹಿಳೆ(women) ಅಂಗಡಿಗೆ ಬಂದಿದ್ದಾರೆ. ಚಿನ್ನದ ಸರ(gold chain) ಖರೀದಿ ಮಾಡುವುದಾಗಿ ಕೇಳಿ ಚಿನ್ನದ ಸರಗಳ ವೀಕ್ಷಣೆ ಮಾಡಿದ್ದಾರೆ. ಅಲ್ಲಿಯೇ ಇದ್ದ ಅಂಗಡಿಯವ ಮಹಿಳೆ ಕೈಯಲ್ಲಿ ಚಿನ್ನದ ಸರ ಒಂದನ್ನು ನೀಡಿದ್ದಾರೆ. ಈ ವೇಳೆ ಯುವತಿ ಹಾಗೂ ಮಹಿಳೆ ಮಾತಿನ ಮೂಲಕ ಜ್ಯುವೆಲ್ಲರಿ ಶಾಪ್ ಮಾಲೀಕ(shop owner) ಮತ್ತು ಕೆಲಸದವರ(workers) ಗಮನ(attention) ಬೇರೆಡೆ(daivart) ಸೆಳೆದಿದ್ದಾರೆ. ನಂತರ ಎಟಿಎಂ‌ನಲ್ಲಿ(ATM) ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಎಸ್ಕೇಪ್ ಆಗಿರುವುದು ಸಿಸಿಟಿ ದೃಶ್ಯದಲ್ಲಿ ನೋಡಬಹುದಾಗಿದೆ.

ಕೆಲ ಗಂಟೆಗಳ ಬಳಿಕ ಚಿನ್ನದ ಸರವನ್ನು ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಜ್ಯುವೆಲ್ಲರಿ ಶಾಪ್ ಮಾಲೀಕ ಘಟನೆಗೆ ಸಂಬಂಧಿಸಿ ಸರ ಕದ್ದು ಪರಾರಿಯಾದ ಮಹಿಳೆಯರ ವಿರುದ್ಧ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ತುಮಕೂರು ನಗರ ಠಾಣೆ ಪೊಲೀಸರು ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.


[ays_poll id=3]