This is the title of the web page
This is the title of the web page
international News

ಕ್ಯಾಮೆರಾ ಕಣ್ಣಲ್ಲಿ ಸರಿಯಾಯಿತು ಚಂದಿರನ ಸುಂದರ ವೀಡಿಯೋ


K2 ಪೊಲಿಟಿಕಲ್ ನ್ಯೂಸ್ : ಇಸ್ರೋನ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಚಂದ್ರಯಾನ-3 ಮಿಷನ್‍ನ ಬಾಹ್ಯಾಕಾಶ ನೌಕೆ ಶನಿವಾರ ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತಿದ್ದಂತೆಯೇ ಚಂದ್ರನ ಕೆಲ ಫೋಟೊಗಳನ್ನು ಸೆರೆ ಹಿಡಿದಿದೆ. ಚಂದ್ರಯಾನ -3 ಚಂದ್ರನ ಮೊದಲ ಚಿತ್ರಗಳನ್ನು ಹಂಚಿಕೊಂಡಿದ್ದು ಅವು ಅದ್ಭುತವಾಗಿ ಕಾಣುತ್ತಿವೆ!

ಆಗಸ್ಟ್ 5, 2023ರಂದು ಚಂದ್ರಯಾನ-3 ನೌಕೆ ಚಂದಿರನ ಕಕ್ಷೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಚಂದ್ರನನ್ನು ಕಂಡ ಬಗೆಯಿದು.. ಎಂದು ಚಂದ್ರಯಾನದ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋ ಸಹಿತ ಪೋಸ್ಟ್‌ ಮಾಡಲಾಗಿದೆ. ಚಂದ್ರನ ಅಂಗಳದಲ್ಲಿ ಇಳಿಯುವ ಉದ್ದೇಶದಿಂದ ನಭಕ್ಕೆ ಹಾರಿರುವ ಚಂದ್ರಯಾನ-3 ನೌಕೆಯ ಪಯಣ ಇಲ್ಲಿಯವರೆಗೆ ಸುಗಮವಾಗಿ ಸಾಗಿದ್ದು, ಈ ನೌಕೆಯಲ್ಲಿರುವ ವಿಕ್ರಂ ಲ್ಯಾಂಡರ್ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ನಿರೀಕ್ಷೆಯಿದೆ.

ಶ್ರೀಹರಿಕೋಟದಿಂದ ಉಡ್ಡಯನಗೊಂಡ 22 ದಿನಗಳ ಬಳಿಕ ಆ.5ರ ಶನಿವಾರದಂದು ಈ ನೌಕೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ತನ್ನ ಸುದೀರ್ಘ 41 ದಿನಗಳ ಪಯಣದಲ್ಲಿ ಚಂದ್ರಯಾನ -3 ನೌಕೆ ವಿಕ್ರಂ ಲ್ಯಾಂಡರನನ್ನು ಇದುವರೆಗೆ ವಿಶ್ವದ ಯಾವ ದೇಶಗಳೂ ಇಳಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮಹದುದ್ದೇಶವನ್ನು ಹೊಂದಿದ್ದು, ಈ ಕ್ಷಣಕ್ಕಾಗಿ ಭಾರತೀಯರು ಮಾತ್ರವಲ್ಲದೇ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.


[ays_poll id=3]