
ರಾಯಚೂರು : ಕೇಂದ್ರ ಸರ್ಕಾರದ ಜನ ವಿರೋಧಿ ರೈತ ವಿರೋಧಿ ನೀತಿಗಳನ್ನ ವಿರೋಧಿಸಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸುವ ನಿಟನಲ್ಲಿ ಚರ್ಚೆ ಮಾಡಲು ಸೆಪ್ಟಂಬರ್ 23ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮವನ್ನು ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತು ಜನಂದೋಲನ ಮಹಾ ಮೈತ್ರಿ ಸಹಯೋಗದಲ್ಲಿ ಆಯುಧಿಸಲಾಗಿದೆ ಎಂದು ಎಸ್ ಆರ್ ಹಿರೇಮಠ್ ಹೇಳಿದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ ರೈತ ವಿರೋಧಿ ಕಾರ್ಪೊರೇಟ್ ಪರ 3 ಕಾಯ್ದೆಗಳಲ್ಲಿ ಕರ್ನಾಟಕ ಕೃಷಿ ಕಾಯ್ದೆಗಳನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಕಾಯ್ದೆ 2020 ರದ್ದುಪಡಿಸಿದನ್ನು ನಮ್ಮ ಸಂಘಟನೆಗಳು ಸ್ವಾಗತಿಸುತ್ತವೆ.ಉಳಿದ 2 ಕಾಯ್ದೆಗಳಾದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ತ್ವರಿತವಾಗಿ ರದ್ದುಪಡಿಸಬೇಕು. ಜೊತೆಗೆ ಬಿಜೆಪಿ ಸರ್ಕಾರವು ತನ್ನ ದುರಾಡಳಿತದಲ್ಲಿ ಮಾಡಿದ ಜನ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಿ, ಕನಿಷ್ಠ ಪಕ್ಷ ಇಂದಿನ ಕಾಂಗ್ರೆಸ್ ಸರ್ಕಾರವು ಪರಿಸ್ಥಿತಿಯನ್ನು ಕೂಡಲೇ ಪುನರ್ ಸ್ಥಾಪಿಏಸುವ ಕೆಲಸ ಮಾಡಬೇಕಿದೆ ಎಂದರು.
ಸೆಪ್ಟಂಬರ್ 23ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳಿಂದ ಮುಖಂಡರು ಹೋರಾಟಗಾರರು ಆಗಮಿಸಲಿದ್ದು ಮೂರು ದಿನಗಳ ಕಾಲ ಈ ಒಂದು ಚರ್ಚೆ ನಡೆಯಲಿದೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]