This is the title of the web page
This is the title of the web page
State NewsVideo News

ಕಾಂತರಾಜ್ ಪರಿಷ್ಕೃತ ವರದಿ ವೈಜ್ಞಾನಿಕವಾಗಿಲ್ಲ : ಚನ್ನಸಿದ್ದರಾಮ ಶ್ರೀಗಳು..?


K2kannadanews.in

Unscientific Report ಸಿಂಧನೂರು : ಕಾಂತರಾಜ್ ವರದಿ (Kantharaj report) ಪರಿಷ್ಕರಿಸಿ ಸರ್ಕಾರಕ್ಕೆ ಜಯಪ್ರಕಾಶ್ ಹೆಗಡೆ (Jayapraksh hegade) ಸಲ್ಲಿಸಿರೊ ಜಾತಿಗಣತಿ ವರದಿ ವೈಜ್ಞಾನಿಕವಾಗಿ ತಯಾರಿಸಿಲ್ಲ ಅಂತ ಎಲ್ಲಾ ಕಡೆ ಚರ್ಚೆ ಆಗುತ್ತಿದೆ, ಪ್ರತಿಯೊಬ್ಬರನ್ನ ಸಂಪರ್ಕಿಸಿ (Contact) ಅವರನ್ನ ಕೇಳಿ ತಯಾರಿಸಿಲ್ಲ ಅನ್ನೋ ಆರೋಪ (Aligation) ಕೇಳಿ ಬರುತ್ತಿದೆ‌ ಅಂತ ಶ್ರೀಶೈಲ (Srishila) ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದ್ದಾರೆ.‌

ರಾಯಚೂರು (Raichur) ಸಿಂಧನೂರಿನಲ್ಲಿ (Sindhanur) ಮಾತನಾಡಿರುವ ಶ್ರೀಗಳು ಹೆಗಡೆಯವರು ಸಿಎಂಗೆ ವರದಿ ಒಪ್ಪಿಸಿದ್ದಾರೆ, ಅದನ್ನ ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವುದು ಸರ್ಕಾರದ (Government) ಮಟ್ಟದಲ್ಲಿದೆ. ಈ ಹಂತದಲ್ಲಿ ಅದರ ಬಗ್ಗೆ ಏನೇ ಹೇಳುವುದಕ್ಕು ಮುನ್ನ ವರದಿಯಲ್ಲಿ ಏನೇನಿದೆ ಅನ್ನೋದನ್ನ ಗಮನಿಸಬೇಕಾಗತ್ತೆ ಎಂದರು. ಸಿದ್ಧಗಂಗಾ ಶ್ರೀಗಳು (Siddaganga sri) ನನ್ನನ್ನೇ ಕೇಳಿಲ್ಲ ಅಂತ ಸ್ಪಷ್ಟವಾಗಿ (clarity)ಹೇಳಿದ್ದಾರೆ. ನನ್ನನ್ನೇ ಕೇಳಿಲ್ಲ ಅನ್ನೋರ ಲಿಸ್ಟ್ (List) ಹೊರಬರಬೇಕಿದೆ. ನನ್ನ ಕೇಳಿಲ್ಲ ಅನ್ನೋರು ಎಷ್ಟು ಜನ ಇದ್ದಾರೆ.

ಅವರ ಅಂಕಿ ಸಂಖ್ಯೆ (Numbers) ಗೊತ್ತಾದ್ರೆ ಎಷ್ಟು ವೈಜ್ಞಾನಿಕ, ಎಷ್ಟು ಅವೈಜ್ಞಾನಿಕ ಅನ್ನೋದು ಗೊತ್ತಾಗತ್ತೆ. ನನ್ನನ್ನೇ ಕೇಳಿಲ್ಲ ಎನ್ನುವವರ ಲಿಸ್ಟ್ ನಲ್ಲಿ ನಾವು ಇದ್ದೇವೆ. ಈ ದಿಶೆಯಲ್ಲಿ ನಮ್ಮನ್ನೂ ಕೇಳಿಲ್ಲ, ಹೀಗಾಗಿ ಇಂಥವರು ಎಷ್ಟು ಜನ (People) ಇದ್ದಾರೆ. ನಮ್ಮಂಥ ಪ್ರತಿಷ್ಠಿತ ವ್ಯಕ್ತಿಗಳನ್ನ ವಿಶ್ವಾಸ ತೆಗೆದುಕೊಂಡಿಲ್ಲ ಕೇಳಿಲ್ಲ ಅಂದ್ರೆ, ಸಾಮಾನ್ಯ ವ್ಯಕ್ತಿಗಳನ್ನು ಏಷ್ಟರ ಮಟ್ಟಿಗೆ ಕೇಳಿರ್ತಾರೆ ಅನ್ನೋ ಪ್ರಶ್ನೆ ಉದ್ಭವಿಸುತ್ತೆ. ಇಂಥಹ ಸಂಗತಿ ಕ್ರೂಢಿಕರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.


[ays_poll id=3]