This is the title of the web page
This is the title of the web page
Crime NewsLocal News

ಜೆಜೆಎಂ ಅಕ್ರಮ: ಜೆಇ, ಸುಪ್ರಿಡೆಂಟ್, ಎಫ್‌ಡಿಎ ಅಮಾನತು


K2kannadanews.in

JJM Irregularity ರಾಯಚೂರು : ಜಲ ಜೀವನ ಮಿಷನ್‌ (JJM) ಯೋಜನೆಯಲ್ಲಿ ಅಕ್ರಮವೆಸಗಿದ (Irregularity) ಆರೋಪದಡಿ
ಎಂಜಿನಿಯರ್‌ (Engineer) ಸೇರಿ ಮೂರು ಅಧಿಕಾರಿಗಳನ್ನು (Officer) ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧೀನ ಕಾರ್ಯದರ್ಶಿ ಚೇತನ್‌ ಅಮಾನತುಗೊಳಿಸಿದ್ದಾರೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ನಾಗರಬೆಂಚಿ ಗ್ರಾಮದಲ್ಲಿ 383 ಮನೆಗಳಿಗೆ (House) ಜೆಜೆಎಂ ಯೋಜನೆಯಡಿ ಕೈಗೊಂಡ 19.66 ಲಕ್ಷ ವೆಚ್ಚದ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ (Contractor) ಎರಡು ಬಾರಿ ಬಿಲ್‌ (Bill) ಮಂಜೂರು ಮಾಡಿದ್ದಾರೆ ಎಂದು ಕೆಲ ಸಂಘಟನೆಯ ಮುಖಂಡರು ದೂರು ನೀಡಿದ್ದರು. ಇಲಾಖೆ ಮಟ್ಟದಲ್ಲಿ ತನಿಖೆ (Investigation) ನಡೆಸಿದಾಗ ಅಕ್ರಮ ನಡೆದಿರುವುದು ಸಾಬೀತಾಗಿದೆ (Prof).

ಹಾಗಾಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಫಜಲ್‌ ಮೆಹಮೂದ್‌, ಲೆಕ್ಕ ವಿಭಾಗದ ಅಧೀಕ್ಷಕ ಅಬ್ದುಲ್‌ ರಹೀಮ್‌ ಹಾಗೂ ಲೆಕ್ಕ ಶಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಜಾಕೀರ್‌ಹುಸೇನ್‌ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧೀನ ಕಾರ್ಯದರ್ಶಿ ಚೇತನ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ.


[ays_poll id=3]