This is the title of the web page
This is the title of the web page
Local News

ಬಿಜೆಪಿ ಜಿಲ್ಲಾ ಕಛೇರಿ ಉದ್ಘಾಟನೆ : ದಿ.ಅಶೋಕ ಗಸ್ತಿ ಮರೇತಿದ್ದು ದುರಾದೃಷ್ಟಕರ


ರಾಯಚೂರು: ಕಾರ್ಯಕರ್ತರ ಬಹುದಿನದ ಆಸೆ ಬಿಜೆಪಿಯ ಸ್ವಂತ ಕಾರ್ಯಾಲಯ ನಗರದಲ್ಲಿ ಉದ್ಘಾಟನೆಗೊಂಡಿದ್ದು, ಉಸ್ತುವಾರಿ ಮಂತ್ರಿಗಳು, ಹಾಗೂ ಶಾಸಕರು, ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದಿದೆ, ಆದರೆ ಇವೆಲ್ಲದರ ಮಧ್ಯೆ ಬಿಜೆಪಿಯ ಸಂಘಟನೆಗೆ ತಮ್ಮ ಜೀವಿತಾವಧಿಯ ಸುಮಾರು ಮೂವತ್ತು ವರ್ಷಗಳ ಕಾಲ ನೀಡಿ, ರಾಜ್ಯಸಭೆಗೆ ಆಯ್ಕೆಯಾಗಿ ರಾಯಚೂರಿನಲ್ಲಿ ಬಿಜೆಪಿ ಏಳಿಗೆಗಾಗಿ ದುಡಿದಿದ್ದ ದಿವಂಗತ ಅಶೋಕ ಗಸ್ತಿ ರವರನ್ನು ಯಾವೊಬ್ಬ ನಾಯಕರು ನೆನೆಪಿಸಿಕೊಳ್ಳದಿರುವುದು ದುರಾದೃಷ್ಟಕರ, ಎಂದು ಅಶೋಕ ಗಸ್ತಿ ರವರ ಆಪ್ತ ಸಹಾಯಕರಾಗಿದ್ದ ವಿನೋದ ಸಗರ ಆರೋಪಿಸಿದ್ದಾರೆ.

ಅಶೋಕ ಗಸ್ತಿ ರವರು ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅಂದಿನ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿ ಶಿಲಾನ್ಯಾಸ್ ನೇರವೇರಿತ್ತು, ಬಹುದಿನಗಳ ಕನಸು ನನಸಾಗಿದ್ದನ್ನು ಕಂಡು ಅತ್ಯಂತ ಹರ್ಷದಿಂದ ತಮ್ಮ ಸಂತಸವನ್ನು ಹಂಚಿಕೊಂಡಿದ್ದ ಅವರು, ಅದು ಪೂರ್ಣಗೊಳ್ಳುವ ಮುನ್ನವೇ ಇಹಲೋಕ ತ್ಯಜಿಸಿದ್ದರು.

ಆದರೆ ಇವೆಲ್ಲದರ ಅರಿವು ಇರುವ ಬಿಜೆಪಿ ಜಿಲ್ಲಾಧ್ಯಕ್ಷರು, ನಗರ ಅಧ್ಯಕ್ಷರು, ಹಾಗೂ ಹಿರಿಯ ನಾಯಕರು ಅಶೋಕ ಗಸ್ತಿ ರವರ ಕುಟುಂಬಕ್ಕೆ ಸೌಜನ್ಯಯುತ ವಾಗಿ ಆಹ್ವಾನ ಕೊಡಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೇ, ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನ ಅವಮಾನಿಸಿರುವುದು ದುರಾದೃಷ್ಟ.

ಮುಂದೆ ಬರುವ ದಿನಗಳಲ್ಲಿ ಕಾರ್ಯಕರ್ತರಿಗೆ ಯಾವ ರೀತಿ ಬೆಲೆ ಸಿಗುತ್ತೆ ಎಂಬುದು ಯಕ್ಷ ಪ್ರಶ್ನೆ ಅಧಿಕಾರದ ಮಧದಲ್ಲಿರುವ ಜಿಲ್ಲೆಯ ನಾಯಕರುಗಳು ಗತಕಾಲದ ಇತಿಹಾಸ ಮರೆತಿರುವ ಹಾಗಿದೆ. ಕಾರ್ಯಕರ್ತರೇ ಸಿಗದ ಕಾಲದಲ್ಲಿ ಯುವಕರ ತಂಡಗಳನ್ನು ಕಟ್ಟಿ ಪಕ್ಷವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದ
ಅಶೋಕ ಗಸ್ತಿ ರವರ ಕೆಲಸವನ್ನು ಇಂದು ನಗಣ್ಯ ಮಾಡಿರುವ ಜಿಲ್ಲೆಯ ನಾಯಕರು ಮುಂದೊಂದು ದಿನ ಅಧಿಕಾರದ ಮಧದಲ್ಲಿ ಕಾರ್ಯಕರ್ತರನ್ನ ನಡುನೀರಿನಲ್ಲಿ ಬಿಟ್ಟರು ಅಚ್ಚರಿ ಪಡಬೇಕಿಲ್ಲ ಎಂದು ಅಸಮಾಧಾನ ಹೊರಹಾಕಿದರು.


[ays_poll id=3]