This is the title of the web page
This is the title of the web page
Crime NewsState News

ಈಶ್ವರ ಲಿಂಗ, ಬಸವಣ್ಣ ಮೂರ್ತಿ ಭಗ್ನ : ಗುಂಡಿ ಅಗೆದಿದ್ದು ಯಾಕೆ..?


K2kannadanews.in

Desire for treasure : ಈಶ್ವರ ಮೂರ್ತಿಯ ಮೇಲ್ಭಾಗದ ಲಿಂಗ ಹಾಗೂ ಬಸವಣ್ಣ (Eshwara and Nandi idol) ಮೂರ್ತಿಯ ಕುತ್ತಿಗೆ ಭಾಗವನ್ನು ದುಷ್ಕರ್ಮಿಗಳು (criminals) ಕತ್ತರಿಸಿಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಕರಡಕಲ್ಲನ ಬಿಲ್ಲಮರಾಜನ (Billamaraj) ಬೆಟ್ಟದ ಕೆಳಭಾಗದ ಗುರುಲಿಂಗೇಶ್ವರ ಕರ್ತೃ ಗದ್ದುಗೆ ಮೇಲಿನ ಈಶ್ವರ ಲಿಂಗ ಮತ್ತು ಬಸವಣ್ಣ ಮೂರ್ತಿಗಳು ಭಗ್ನಗೊಂಡಿವೆ. ಅಲ್ಲದೇ ಗದ್ದುಗೆ ಹಿಂಭಾಗದಲ್ಲಿ ಆಳವಾದ ಗುಂಡಿ (deep hole) ಅಗೆಯಲಾಗಿದ್ದು, ಇವುಗಳನ್ನು ಗಮನಿಸಿದರೆ ನಿಧಿ (treasure) ಆಸೆಗಾಗಿ ಈ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಸ್ಥಳಗಳು (Hysterical places) ನಿಧಿಗಳ್ಳರ ಹಾವಳಿಗೆ ನೆಲಸಮಗೊಳ್ಳುತ್ತಿವೆ ಎಂಬುದು ಸ್ಥಳಿಯರ ಆತಂಕವಾಗಿದೆ.

ಕುಣಿಸೋಮೇಶ್ವರ ದೇವಸ್ಥಾನದ ಮೂರ್ತಿ, ಶಿಲಾಶಾಸನ (Epitaph) ಸ್ಥಳಗಳಲ್ಲಿ ಕೂಡ ಹಲವು ಬಾರಿ ನಿಧಿಗಳ್ಳರ ಕೈಚಳಕ ನಡೆದಿರುವ ಸಂಗತಿಗಳು (facts) ಈ ಹಿಂದೆ ನಡೆದಿವೆ. ಐತಿಹಾಸಿಕ ಪ್ರಸಿದ್ಧ ಬಿಮ್ಮರಾಜನ ಬೆಟ್ಟದಲ್ಲಿ ನಡೆಯುತ್ತಿರುವ ನಿಧಿಗಳ್ಳರ ಕೈಚಳಕ ಹಾಗೂ ದುಷ್ಕರ್ಮಿಗಳ ಗುಂಪು ದೇವರ ಮೂರ್ತಿಗಳ ಭಗ್ನಗೊಳಿಸಿರುವ (broken) ಕುರಿತು ಪೊಲೀಸ್‍ ಇಲಾಖೆ (police) ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಾಚ್ಯವಸ್ತು ಇಲಾಖೆ ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಮುಂದಾಗಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.


[ays_poll id=3]