This is the title of the web page
This is the title of the web page
Sports News

ಭಾರತ ಕಳಪೆ ಪ್ರದರ್ಶನ : ಆಸ್ಟ್ರೇಲಿಯಾಕ್ಕೆ 296 ರನ್ ಗಳ ಮುನ್ನಡೆ


K2 ಸ್ಪೋರ್ಟ್ಸ್ ನ್ಯೂಸ್ : ಲಡನ್ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನ ಮೂರನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವ ಮೂಲಕ 296 ರನ್ ಗಳಿಂದ ಮುನ್ನಡೆ ಪಡೆದುಕೊಂಡಿದೆ.

ಪಂದ್ಯ ಮುಕ್ತಾಯದ ವೇಳೆಗೆ, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಕ್ಯಾಮರೂನ್ ಗ್ರೀನ್ ಕ್ರಮವಾಗಿ 41 ಮತ್ತು 7 ರನ್ ಗಳಿಸುವ ಮೂಲಕ ಶನಿವಾರದ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನಾ ಬ್ಯಾಟಿಂಗ್ ಪುನರ್ ಆರಂಭಿಸಿದ ಭಾರತ ಕೆಎಸ್ ಭಾರತ್ ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ಅಜಿಂಕ್ಯ ರಹಾನೆ (89) ಮತ್ತು ಶಾರ್ದೂಲ್ ಠಾಕೂರ್ (51) ಏಳನೇ ವಿಕೆಟಿಗೆ 109 ರನ್ಗಳನ್ನು ಸೇರಿಸುವ ಮೂಲಕ ತಮ್ಮ ತಂಡವನ್ನು ಫಾಲೋ-ಆನ್ ಭೀತಿಯಿಂದ ತಪ್ಪಿಸಲು ಸಹಾಯ ಮಾಡಿದರು.

ಭೋಜನ ವಿರಾಮದ ನಂತರ ಭಾರತ ಉಳಿದ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡು 69.4 ಓವರ್ಗಳಲ್ಲಿ 296 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟುಗಳನ್ನು ಕಬಳಿಸಿದರೆ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ :
ಆಸ್ಟ್ರೇಲಿಯಾ: ಮೊದಲ ಇನ್ನಿಂಗ್ಸ್ 469, ಎರಡನೇ ಇನ್ನಿಂಗ್ಸ್ : 123/4

ಭಾರತ ಮೊದಲ ಇನಿಂಗ್ಸ್: 69.4 ಓವರ್ಗಳಲ್ಲಿ 296 (ಅಜಿಂಕ್ಯ ರಹಾನೆ 89, ಶಾರ್ದೂಲ್ ಠಾಕೂರ್ 51, ರವೀಂದ್ರ ಜಡೇಜಾ 48; ಪ್ಯಾಟ್ ಕಮಿನ್ಸ್ 3/83).


[ays_poll id=3]