This is the title of the web page
This is the title of the web page
Local News

OPS ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ


ಸಿರವಾರ : OPS ಜಾರಿಗಾಗಿ ಒತ್ತಾಯಿಸಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘದಿಂದ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ತಾಲೂಕಧ್ಯಕ್ಷ ಜಾಹೀದ್ ಪಾಶಾ ಕುರ್ಡಿ ತಿಳಿಸಿದರು.

ಏಪ್ರಿಲ್ 1,2006 ರ ನಂತರ ನೇಮಕಾತಿ ಹೊಂದಿದ ಎಲ್ಲಾ ಸರ್ಕಾರಿ ನೌಕಕರಿಗೆ ಈ ಮುಂಚೆ ಇರುವ ಹಳೆ ಪಿಂಚಣಿ ಯೋಜನೆ ರದ್ದು ಪಡಿಸಿ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ಜಾರಿಗೆ ತಂದಿದ್ದು ಇದು ಅವೈಜ್ಞಾನಿಕವಾಗಿದೆ. ಅಲ್ಲದೇ ಈ ಯೋಜನೆ ಯಾವುದೇ ಆರ್ಥಿಕ ಭದ್ರತೆ ಹೊಂದಿರುವುದಿಲ್ಲ.
ಆದ್ದರಿಂದ ಇದನ್ನು ವಿರೋಧಿಸಿ 2005 ರಿಂದ ಎನ್.ಪಿ.ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಇವರ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ನಮ್ಮ ಕರ್ನಾಟಕ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿರುವುದಿಲ್ಲ. ಆದರೆ ಈಗಾಗಲೇ ರಾಜಸ್ಥಾನ, ಪಂಜಾಬ್, ಛತ್ತೀಸಗಡ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಒಪಿಎಸ್ ಜಾರಿಗೊಳಿಸಲಾಗಿದೆ. ಅದರಂತೆ ಸರ್ಕಾರ ಕೂಡ ನಮಗೆ ಓಪಿಎಸ್ ಜಾರಿ ಮಾಡಬೇಕೆಂದು ಒತ್ತಾಯಿಸಿ ಇದೇ ಡಿಸೆಂಬರ್ 19 ರಿಂದ ರಾಜ್ಯ ಮಟ್ಟದ ನೌಕರರು ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರಣ ಎಲ್ಲಾ ಸರ್ಕಾರಿ ಎನ್.ಪಿ.ಎಸ್ ನೌಕಕರು ಭಾಗವಹಿಸಬೇಕೆಂದು ಮನವಿ ಮಾಡಿದರು.


[ays_poll id=3]