This is the title of the web page
This is the title of the web page
State News

ವಿತರಣಾ ನಾಲೆಗಳ ಅಪೂರ್ಣ ಕಾಮಗಾರಿ; ಸಂಕಷ್ಟದಲ್ಲಿ ರೈತರು ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು


ಲಿಂಗಸಗೂರು : ನಾರಾಯಣಪುರ ಬಲದಂಡೆ ಮುಖ್ಯನಾಲೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗಳು, ಬಹುತೇಕ ಕಡೆಗಳಲ್ಲಿ  ಅಪೂರ್ಣಾವಸ್ಥೆಯಲ್ಲಿ ಬಿಟ್ಟಿದ್ದು, ರೈತರು ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಆರಂಭದ ದಿನಗಳಿಂದಲೂ ಒಂದಿಲ್ಲೊಂದು ಸಮಸ್ಯೆಗಳಲ್ಲಿ ಸಿಲಕುತ್ತ ಸಾಗಿದ  ತದನಂತರ ಮಂದಗತಿಗೆ ತಿರುಗಿದ ಕಾಮಗಾರಿ ರೈತರ ಆಶಾ ಭಾವನೆಗಳಿಗೆ ಕೊಳ್ಳಿ ಇಟ್ಟಿದೆ. ಅರೆಬರೆ ಕೆಲಸ ಬಿಟ್ಟು ಹೋಗಿರುವುದು ಸಮರ್ಪಕ ನೀರು ಹರಿಸುವಿಕೆಗೆ ತೊಂದರೆಯಾಗಿದೆ. 7ನೇ ವಿತರಣಾ ನಾಲೆ ಕಾಮಗಾರಿ ಈಗ ಆರಂಭಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 7(ಎ) ವಿತರಣಾ ನಾಲೆ ಗಲಗಿನವರ ದೊಡ್ಡಿ ಪ್ರದೇಶದಿಂದ ರಾಮಲೂಟಿ ಸೀಮಾಂತರದವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪರಾಂಪುರ ತಾಂಡಾ ಬಳಿ ನಾಲೆ ಕೊಚ್ಚಿ ಸುತ್ತಮುತ್ತ ರೈತರ ಜಮೀನು ಬೆಳೆ   ಕೂಡ ಇಂದಿಗೂ ದುರಸ್ತಿಗೊಳಿಸಿಲ್ಲ.

ಇನ್ನು ಪರಾಂಪುರ ಕ್ರಾಸ್‍ ನಂತರದಲ್ಲಿ ರಾಮಲೂಟಿ ವರೆಗಿನ ವಿತರಣಾ ನಾಲೆ ಆದನಗೌಡರ ಜಮೀನು, ಸಖ್ಯಪ್ಪ ಲಮಾಣೇರದೊಡ್ಡಿ, ಭೀಮನಗೌಡ, ಹನುಮಂತಪ್ಪ ಪರಾಂಪುರ ಸೇರಿದಂತೆ ಬಹುತೇಕ ಜಮೀನುಗಳ ಬಳಿ ಅಲ್ಲಲ್ಲಿ 5, 10, 300 ಮೀಟರ್ ಕಾಮಗಾರಿ ಮಾಡದೆ ಅಗೆದು ಬಿಟ್ಟು ಹೋಗಿದ್ದಾರೆ. ಬಹುತೇಕ ಡ್ರಾಪ್‍ಔಟ್‍ಗಳ ದುರಸ್ತಿ ಕಾರ್ಯ ಕೈಗೊಳ್ಳದೆ ಕೇವಲ ಸಿಮೆಂಟ್‍ ಪ್ಲಾಸ್ಟರ್ ಮಾಡಿದ್ದರಿಂದ ಅದು ಕೂಡ ಕೆಲವೆಡೆ ಕಿತ್ತು ಹೋಗಿದೆ. ಕಾಮಗಾರಿ ಗುಣಮಟ್ಟ ಬಗ್ಗೆ ತಮಗೆ ಏನೂ ತಿಳಿಯದು. ಕೆಲವೆಡೆ ಕಾಮಗಾರಿ ಪೂರ್ಣಗೊಳಿಸದೆ ಹೋಗಿದ್ದಾರೆ. ಅಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಅವಧಿಗೆ ಮುಂಚೆಯೇ ಕೆಲವೆಡೆ ಹೂಳು ತುಂಬಿದೆ. ಮುಳ್ಳುಕಂಟಿ ಬೆಳೆದು ಕಾಲುವೆ ಮುಚ್ಚಿ ಹೋಗಿವೆ. ಜಮೀನಿಗೆ ಹೋಗಿಬರಲು ಸಿಡಿ ನಿರ್ಮಾಣ ಮಾಡಿಲ್ಲ. ಜಮೀನಿಗೆ ನೀರು ಹರಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.


[ays_poll id=3]