This is the title of the web page
This is the title of the web page
Local News

ಐತಿಹಾಸಿಕ ಮಾವಿನ ಕೆರೆ ಒತ್ತುವರಿಗೆ ಇಲ್ಲ ಕಡಿವಾಣ


ರಾಯಚೂರು : ರಾಯಚೂರು ನಗರದಲ್ಲಿ ಇರುವ ಐತಿಹಾಸಿಕ ಮಾವಿನಕೆರೆ ಮತ್ತು ಗೊಲ್ಲನಕುಂಟೆ ಕೆರೆಗಳ ಅಭಿವೃದ್ಧಿ ಮಾಡುವಲ್ಲಿ ನಗರಸಭೆ, ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತೇವೆ. ಈ ಹಿನ್ನಲೆಯಲ್ಲಿ ಐತಿಹಾಸಿಕ ಮಾವಿನಕೆರೆ ಸುತ್ತಲೂ ಹೆಗ್ಗಿಲ್ಲದೆ ನಡೆಯುತ್ತಿದೆ ಒತ್ತುವರಿ ಕಾರ್ಯ.

ಜಿಲ್ಲೆಯಲ್ಲಿ ಜಲಮೂಲಗಳ ಸಂರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದ್ದು, ಕೆರೆಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಖರ್ಚಾಗುತ್ತಿಲ್ಲ. ನಗರದ ಹೃದಯ ಭಾಗದಲ್ಲಿರುವ ಮಾವಿನಕೆರೆ ಸುಮಾರು 10 ಎಕರೆಯಷ್ಟು ಒತ್ತುವರಿಯಾಗಿದೆ. ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ. ಕೆರೆಯ ಒಟ್ಟು ವಿಸ್ತೀರ್ಣ 107 ಎಕರೆಯಷ್ಟಿದೆ. ಅದರಲ್ಲಿ ಈ ಮುಂಚೆಯೇ ಐದಾರು ಎಕರೆ ಒತ್ತುವರಿ ಮಾಡಲಾಗಿತ್ತು. ಈಚೆಗೆ ಇಂದಿರಾ ನಗರ ಮತ್ತು  ಐ ಡಿ ಎಸ್ ಎಂ ಟಿ ಲೇಔಟ್ ಭಾಗದದಲ್ಲೂ ಘನತ್ಯಾಜ್ಯ, ಮೊರಂ ಹಾಕುವ ಮೂಲಕ ಇನ್ನೂ ಐದಾರು ಎಕರೆ ಕೆರೆಯ ಭಾಗವನ್ನೇ ಮುಚ್ಚಲಾಗಿದೆ.

ಕೆರೆ ಸಂರಕ್ಷಣೆ, ಅಭಿವೃದ್ಧಿಗಾಗಿ 12 ಕೋಟಿ ಮೀಸಲಿಟ್ಟಿದ್ದರೂ ಜಿಲ್ಲಾಡಳಿತ ಕೆಲಸ ಆರಂಭಿಸಿಲ್ಲ. ಕೆರೆಗೆ ನೇರವಾಗಿ ಚರಂಡಿಗಳ ಸಂಪರ್ಕ ಕಲ್ಪಿಸಿದ್ದು, ನೀರೆಲ್ಲ ಕಲುಷಿತಗೊಂಡಿದೆ. ಕೆರೆಯ ಸಂರಕ್ಷಣೆಯ ಬಗ್ಗೆ ಕೇವಲ ಭಾಷಣಗಳು ಆಗುತ್ತಿವೆ ಹೊರತು ಅಭಿವೃದ್ಧಿ ಶೂನ್ಯ. ಮತ್ತೊಂದೆಡೆ ಮಾವಿನ ಕೆರೆಯ ನಾಲ್ಕು ದಿಕ್ಕುಗಳಿಂದ ಪ್ರಭಾವಿ ನಾಯಕರು ನಗರಸಭೆಯ ಅಧಿಕಾರಿಗಳ ಪರೋಕ್ಷ ಬೆಂಬಲದಿಂದ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳು, ಮನೆಗಳ ನಿರ್ಮಾಣ ಮಾಡುತ್ತಿದ್ದು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡ ಉದಾಹರಣೆಯಿಲ್ಲ ಎಂದು ಪರಿಸರವಾದಿಗಳ ಆರೋಪವಾಗಿದೆ.


[ays_poll id=3]