This is the title of the web page
This is the title of the web page
Crime NewsState NewsVideo News

ವಿದ್ಯಾರ್ಥಿಗಳ ಕೈಯ್ಯಲ್ಲಿ ಝಳಪಿಸಿದ ಮಾರಕಾಸ್ತ್ರ..?


K2kannadanews.in

Crime News ರಾಯಚೂರು : ಅಮೆರಿಕದಂತಹ (America) ಮುಂದುವರೆದ ದೇಶಗಳಲ್ಲಿ ಪುಟ್ಟ ಮಕ್ಕಳಿಗೂ ಗನ್‌ (gun), ಬಂದೂಕುಗಳು ಸಿಗುತ್ತವೆ. ಕೆಲವು ವಿದ್ಯಾರ್ಥಿಗಳು (Students) ಶಾಲೆಗಳಿಗೆ (school) ಅವುಗಳನ್ನು ತೆಗೆದುಕೊಂಡು ಹೋಗಿ ಅವಾಂತರ ಸೃಷ್ಟಿಸಿದ ಘಟನೆಗಳೂ ನಡೆದಿವೆ. ಆದ್ರೆ ನಮ್ಮ ಭಾರತದಲ್ಲಿ ಮಕ್ಕಳಿಗೆ ಯಾಕೆ, ದೊಡ್ಡವರಿಗೂ ಅಷ್ಟು ಸುಲಭವಾಗಿ ಗನ್‌ಗಳು ಸಿಗೋದಿಲ್ಲ. ಅಂತಾದ್ರಲ್ಲಿ ಇಂದು ವಿದ್ಯಾರ್ಥಿಗಳು ಶಾಲೆಗೆ ಡ್ರಾಗರ್, ಚಾಕು, ಹಕ್ಕಿಗೆ ಹೊಡೆಯೋ ಗನ್ ಮತ್ತು ಇತರೆ ಟೂಲ್ಸ್​​ನಿಂದ ಹಲ್ಲೆ ಮಾಡಲು ಮುಂದಾಗಿದ್ದ ಘಟನೆ ನಡೆದಿದೆ.

ಹೌದು ರಾಯಚೂರು ನಗರದ ಜ್ಯೋತಿ ಕಾಲೋನಿಯಲ್ಲಿ ಇರುವ ಖಾತೆಗೆ ಶಾಲೆ ಬಳಿ 9ನೇ ಮತ್ತು 7ನೇ ತರಗತಿ (7th standard) ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಇಂದು 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತಿನಿಸು ತರಲು ಶಾಲೆಯಿಂದ ಹೊರಗಡೆ ಬಂದಿದ್ದಾನೆ. ಈ ವೇಳೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು (Friends) ಬೈಕ್​ (Bike) ಮೇಲೆ ಬಂದು 9ನೇ ತರಗತಿಯ ವಿದ್ಯಾರ್ಥಿಯನ್ನ ಅಡ್ಡ ಹಾಕಿದ್ದಾರೆ. ಆಗ 9ನೇ ತರಗತಿಯ ವಿದ್ಯಾರ್ಥಿ ದಾರಿ ಬಿಡು ಎಂದಿದ್ದಾನೆ. ಅದಕ್ಕೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಮಗೆ ದಾರಿ ಬಿಡು ಎನ್ನುತ್ತೀಯಾ ಏ ಸಾಲೇ ಕೋ ಮಾರೋ ಎಂದು ಆತನಿಗೆ ಚಾಕುವಿನಿಂದ (knifes) ಇರಿಯಲು ಮುಂದಾಗಿದ್ದಾರೆ. ಆಗ 9ನೇ ತರಗತಿ ವಿದ್ಯಾರ್ಥಿ ತಪ್ಪಿಸಿಕೊಂಡಿದ್ದು, ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದಾಗ ಬೆರಳಿಗೆ ಗಾಯವಾಗಿದೆ. ಇದನ್ನು ಕಂಡ ಸ್ಥಳಿಯರು ಬಾಲಕರನ್ನು ಬೆದರಿಸಿದ್ದಾರೆ. ಆಗ ಆರೋಪಿಗಳು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಘಟನೆಯಿಂದ ರಾಯಚೂರು ನಗರದ ಜನ ಬೆಚ್ಚೆ ಬಿದ್ದಿದ್ದು,  ಶಾಲಾ ಮಕ್ಕಳ ಈ ಒಂದು ಕೃತ್ಯಕ್ಕೆ ಭತಗೊಂಡಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಬಾಲಕನ ತಂದೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಗ ಹಲ್ಲೆಗೊಳಗಾದ ಬಾಲಕ ತಂದೆಗೆ, ಎದೆ ನೋವುತ್ತಿದೆ ಎಂದು ಹೇಳಿದ್ದಾನೆ. ಕೂಡಲೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಘಟನೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಕರು ಶಾಲಾ ಆಡಳಿತ ಮಂಡಳಿಗೆ ಕೇಳಿದರೆ, ಗಾಯಾಳು ಬಾಲಕನ ಟಿಸಿ ತೆಗೆದುಕೊಂಡು ಹೋಗುವಂತೆ ಪೋಷಕರಿಗೆ ಒತ್ತಡ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಸದಂತೆ ಶಿಕ್ಷಣ ಇಲಾಖೆ ಮತ್ತು ಆಯಾ ಶಾಲಾ ಆಡಳಿತ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.


[ays_poll id=3]