This is the title of the web page
This is the title of the web page
Education NewsState News

ವಿದ್ಯಾರ್ಥಿಗಳಿಗೆ ಸೈಕಲ್‌ ಕೊಡಿಸಿ, ರಿಯಲ್ ಹಿರೋ ಆದ ಕೂಲಿ ಕಾರ್ಮಿಕ..


K2kannadanews.in

cycle to students ದೇವದುರ್ಗ : ಪ್ರೌಢಶಿಕ್ಷಣ (Secondary education) ಪಡೆಯಲು 5 ಕಿಮಿ ನಡೆದು ಹೋಗುತ್ತಿದ್ದ, 11 ವಿದ್ಯಾರ್ಥಿಗಳ (Students) ಕಷ್ಟ ಅರ್ಥ ಮಾಡಿಕೊಂಡು. ಕೂಲಿ ಕೆಲಸ (wage work) ಮಾಡಿ ದುಡಿದ ದುಡ್ಡಿನಲ್ಲಿ ಸೈಕಲ್ (cycle) ಕೊಡಿಸಿ ರಿಯಲ್ ಹೀರೋ (Real hero) ಆದ ಕೂಲಿ ಕಾರ್ಮಿಕ.

ಹೌದು ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಮಲ್ಕಂದಿನ್ನಿ ಗ್ರಾಮದ ಕೂಲಿ ಕಾರ್ಮಿಕ ಆಂಜನೇಯ (Anjneya). ತಮ್ಮ ಗ್ರಾಮದ 8ನೇ ತರಗತಿಯ (8th Standard) 11 ವಿದ್ಯಾರ್ಥಿಗಳಿಗೆ 60 ಸಾವಿರ (60 thousand) ಖರ್ಚು ಮಾಡಿ, ಹೀರೊ ಸೈಕಲ್‌ಗಳನ್ನು ಕೊಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಲ್ಕಂದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದ (No Highschool) ಕಾರಣ, ಪ್ರೌಢ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು 5 ಕಿ.ಮೀ. ದೂರದ ಹೇಮನೂರಿಗೆ ನಡೆದುಕೊಂಡು (By walk) ಹೋಗಬೇಕಿದೆ. ಇದೇ ವೇಳೆ ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕ ಅಂಜನೇಯ, ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿ,11 ಸೈಕಲ್ ಖರೀದಿಸಿ ಶಾಲೆಗೆ ತೆರಳಿ ಮುಖ್ಯಶಿಕ್ಷಕ ಬಸವರಾಜ ಮತ್ತು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.


[ays_poll id=3]