
ರಾಯಚೂರು : ವೈದ್ಯರ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಪಿಸ್ತೂಲ್, ಬೈಕ್ ಹಾಗೂ ಇತರೆ ವಸ್ತುಗಳ ಜಪ್ತಿ ಮಾಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿದರು.
ರಾಯಚೂರು ಹೊರವಲಯದ ಸಾಥ್ ಮೈಲ್ ಕ್ರಾಸ್ ನಲ್ಲಿ ಆಗಸ್ಟ್ 31 ರಂದು ಡಾ.ಜಯಪ್ರಕಾಶ್ ಪಾಟೀಲ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈದ್ಯನ ಪ್ರೊಫೈಲ್ ನೋಡಿ ಹಣ ಕೀಳಲು ನಿರ್ಧರಿಸಿದ್ದ ಆರೋಪಿಗಳು, ಆಸ್ಪತ್ರೆ ಹಾಗೂ ವೈದ್ಯನ ಮೊಬೈಲ್ ಸಂಖ್ಯೆ ಪಡೆದು ಹಣ ಕೊಡುವಂತೆ ಬೆದರಿಕೆ ಹಾಕಿದ್ದರು, ವೈದ್ಯರು ಯಾವುದಕ್ಕೂ ಪ್ರತಿಕ್ರಿಯಿಸದ ಹಿನ್ನೆಲೆ ಹೆದರಿಸಲು ಕಾರಿನ ಮೇಲೆ ಫೈರಿಂಗ್ ಮಾಡಿ ಹೆದರಿಸಿ ಹಣ ಕೀಳಲು ಮುಂದಾಗಿದ್ದೇವೆ ಎಂದು ಆರೋಪಿಗಳ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣದ ಇಬ್ಬರು ಆರೋಪಿಗಳಾದ ಕಲಬುರ್ಗಿ ಮೂಲದ ಶರ್ಫುದ್ದೀನ್ ಮಿಸ್ಟರಿ, ಎಂ.ಡಿ.ಕಮರುದ್ದೀನ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪಿಸ್ತೂಲ್, ಬೈಕ್ ಹಾಗೂ ಇತರೆ ವಸ್ತುಗಳ ಜಪ್ತಿ ಮಾಡಲಾಗಿದೆ. ಕಳೆದ ಮೂರು ತಿಂಗಳ ಹಿಂದೆಯೇ ಹಣಕ್ಕಾಗಿ ವೈದ್ಯನಿಗೆ ಬೇಡಿಕೆಯಿಟ್ಟಿದ್ದ ಆರೋಪಿಗಳು, 30 ಸಾವಿರ ಡಾಲರ್ ಕ್ರಿಪ್ಟೋ ಕರೆನ್ಸಿ ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡುವಂತೆ ಬೆದರಿಸಿದ್ದ ಆರೋಪಿಗಳು, ಬೆದರಿಕೆ ಹಿನ್ನೆಲೆ ಮೂರು ತಿಂಗಳ ಕೆಳಗೆ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ಮ್ಯಾನೇಜರ್ ಮೂಲಕ ಪ್ರಕರಣ ದಾಖಲಿಸಲಾಗಿತ್ತು, ಎಂದು ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಮಾಹಿತಿ ನೀಡಿ ತನಿಖೆ ಮುಂದುವರೆದಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
![]() |
![]() |
![]() |
![]() |
![]() |
[ays_poll id=3]